• March 16, 2026

ಪತಿ ಮಾಡಿದ ಯಡವಟ್ಟು ಕೆಲಸದಿಂದ ಆಸ್ಪತ್ರೆಗೆ ದಾಖಲಾದ ನಯನತಾರಾ

ಲೇಡಿ ಸೂಪರ್ ಸ್ಟಾರ್ ನಯನತಾರಾ ಮದುವೆಯ ಬಳಿಕ ಮತ್ತೆ ಮತ್ತೆ ಸುದ್ದಿಯಾಗ್ತಿದ್ದಾರೆ. ಮದುವೆಯಾಗಿ ಕೆಲ ತಿಂಗಳು ಕಳೆಯುವುದರೊಳಗೆ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದು ಇದಕ್ಕೆಲ್ಲಾ ಪತಿ ವಿಘ್ನೇಶ್ ಮಾಡಿದ ಯಡವಟ್ಟೇ ಕಾರಣ ಎನ್ನಲಾಗುತ್ತಿದೆ. ಹೊಸ ದಂಪತಿ ನಯನತಾರಾ ಹಾಗೂ ವಿಘ್ನೇಶ್ ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಿದ್ದಾರೆ. ಮದುವೆಯ ಆರಂಭದಲ್ಲಿ ಕೆಲವೊಂದು ಸಮಸ್ಯೆಗಳನ್ನು ಮಾಡಿಕೊಂಡಿದ್ದ ದಂಪತಿಗಳು ಬಳಿಕ ಹೊಸ ಮನೆ ಖರೀದಿಸಿ ಸುದ್ದಿಯಾಗಿದ್ದರು. ಆದ್ರೆ ಇದೀಗ ನಯನತಾರಾ ಆಸ್ಪತ್ರೆಗೆ ದಾಖಲಾಗಿರೋದು ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಮುದ್ದಿನ ಪತ್ನಿಗಾಗಿ ವಿಘ್ನೇಶ್ ಪ್ರೀತಿಯಿಂದ ಅಡುಗೆ ಮಾಡಿ ಬಡಿಸಿದ್ದಾರೆ. ಪತಿ ವಿಘ್ನೇಶ್ ಮಾಡಿದ ಅಡುಗೆ ತಿಂದು ನಯನತಾರಾ ಆರೋಗ್ಯ ಕೆಟ್ಟಿದೆ. ಅಡುಗೆ ತಿಂದ ಬಳಿಕ ನಯನತಾರಾ ವಾಂತಿ ಮಾಡಿಕೊಂಡಿದ್ದು ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ನಯನತಾರಾ ಆರೋಗ್ಯ ಸ್ಥಿತಿ ಸುಧಾರಿಸಿದ್ದ ಮನೆಗೆ ಮರಳಿದ್ದಾರೆ. ಒಟ್ನಲ್ಲಿ ಪ್ರೀತಿಯಿಂದ ವಿಘ್ನೇಶ್ ಮಾಡಿದ ಅಡುಗೆ ತಿಂದು ನಯನತಾರಾ ಆಸ್ಪತ್ರೆಗೆ ದಾಖಲಾಗಿರೋ ವಿಷಯ ತಿಳಿದ ಲೇಡಿ ಸೂಪರ್ ಅಭಿಮಾನಿಗಳು ಮಾತ್ರ ಬೇಸರಗೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now