ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮದುವೆಯಾದ ವ್ಯಕ್ತಿಯ ಜೊತೆ ರಿಲೇಶನ್ ಶಿಪ್ ನಲ್ಲಿದ್ದೆ: ಜಯಶ್ರೀ ಆರಾಧ್ಯ
ಜಯಶ್ರೀ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿಕೊಳ್ಳುವುದರ ಜೊತೆಗೆ ಉದ್ಯಮದಲ್ಲೂ ತೊಡಗಿಕೊಂಡಿದ್ದು, ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಅಂದ ಹಾಗೆ ಜಯಶ್ರೀ ಮದುವೆಯಾದ ವ್ಯಕ್ತಿಯ ಜೊತೆ ಸಂಬಂಧ ಇರಿಸಿಕೊಂಡಿದ್ದು ಆ ವ್ಯಕ್ತಿಯಿಂದ ಜೂಜು ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ.
‘ವಿವಾಹಿತ ವ್ಯಕ್ತಿಯ ಜತೆ ನಾನು ಎರಡು ವರ್ಷ ರಿಲೇಶನ್ಶಿಪ್ನಲ್ಲಿದ್ದೆ. ನಾನು ದುಡ್ಡಿಗೋಸ್ಕರ ಅವರ ಜತೆ ಇರಲಿಲ್ಲ. ಅವರಿಗೆ ನನ್ನ ಬೆಂಬಲ ಬೇಕಿತ್ತು, ನನಗೆ ಅವರ ಬೆಂಬಲ ಬೇಕಿತ್ತು. ಅದಕ್ಕಾಗಿ ಅವರ ಜತೆ ರಿಲೇಶನ್ಶಿಪ್ನಲ್ಲಿದ್ದೆ’ ಎಂದು ಹೇಳಿಕೊಂಡಿದ್ದಾರೆ.
‘ನಾನು ಆ ವ್ಯಕ್ತಿಯಿಂದ ಜೂಜು ಕಲಿತೆ. ಒಂದೂವರೆ ವರ್ಷಗಳ ಕಾಲ ಜೂಜು ಆಡಿದ್ದು ಆ ಬಳಿಕ ಅದರ ಮೇಲೆ ಅಸಹ್ಯ ಉಂಟಾಗಿ ಜೂಜು ಬಿಟ್ಟೆ. ನನ್ನ ಮೇಲೆ ನನಗೆ ಅಸಹ್ಯ ಹುಟ್ಟಿತು. ಅವರಿಗೆ ಕ್ಯಾನ್ಸರ್ ಬಂತು. ಆದರೂ ನಾನು ಅವರನ್ನು ಬಿಡಲಿಲ್ಲ. ನಂತರ ನಾನು ಬಿಸ್ನೆಸ್ ಶುರು ಮಾಡಿದೆ. ಅವರು ತುಂಬಾನೇ ಕಷ್ಟದಲ್ಲಿದ್ದ ಕಾರಣ ನಾನು ಆ ವ್ಯಕ್ತಿಯನ್ನು ಬಿಡಲಿಲ್ಲ ಎಂದು ಜಯಶ್ರೀ ಹೇಳಿದ್ದಾರೆ.
