ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶಿವರಾಜ್ ಕುಮಾರ್ ಮೆಚ್ಚಿದ ‘ಲವ್ 360’ ಟ್ರೈಲರ್
ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದಗಳು. ಚಿತ್ರ ಆಗಸ್ಟ್ ೧೯ರಂದು ತೆರೆ ಕಾಣಲಿದೆ. ಅದಕ್ಕೂ ಮುನ್ನ ನಾವು ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದೇವೆ. ಹೋದ ಕಡೆ ಸಿಗುತ್ತಿರುವ
ಅಭೂತಪೂರ್ವ ಬೆಂಬಲಕ್ಕೆ ಮನತುಂಬಿ ಬಂದಿದೆ. ಖ್ಯಾತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳನ್ನು ಜನಪ್ರಿಯಗೊಳಿಸಿರುವ ಕನ್ನಡ ಕಲಾ ರಸಿಕರು ಚಿತ್ರವನ್ನೂ ಗೆಲಿಸುತ್ತಾರೆಂಬ ನಂಬಿಕೆ ಇದೆ ಎಂದರು ನಿರ್ದೇಶಕ ಶಶಾಂಕ್.
ನನ್ನ ಸ್ನೇಹಿತನೊಬ್ಬ, “ನೀನು ಹೀರೋ ತರಹ ಇಲ್ಲ. ನಿನ್ನ ಸಿನಿಮಾ ಯಾರು ನೋಡುತ್ತಾರೆ ಅಂದಿದ್ದ”. ಆ ಮಾತು ನನ್ನ ಮನಸ್ಸಿನಲ್ಲೇ ಇತ್ತು. ಆದರೆ ಈಗ ಬೇರೆ ಬೇರೆ ಊರುಗಳಿಗೆ, ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ನನ್ನನ್ನು ಗುರುತಿಸುತ್ತಿರುವ ರೀತಿ ಕಂಡು ಆಶ್ಚರ್ಯವಾಗಿದೆ. ಹೆಣ್ಣುಮಕ್ಕಳಂತೂ ನಾವು ನಿಮ್ಮ ಅಭಿಮಾನಿಗಳು. ನಿಮ್ಮ ಚಿತ್ರದ ಹಾಡುಗಳು ತುಂಬಾ ಚೆನ್ನಾಗಿದೆ. ನೀವು ತುಂಬಾ ಚೆನ್ನಾಗಿ ಕಾಣುತ್ತೀರಾ ಎನ್ನುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ನಿರ್ದೇಶಕ ಶಶಾಂಕ್ ಸರ್. ಅವರಿಗೆ ಹಾಗೂ ನನಗೆ ಬೆಂಬಲ ನೀಡುತ್ತಿರುವ ನನ್ನ ತಾಯಿ ಹಾಗೂ ಅಂಕಲ್ ಗೆ ಧನ್ಯವಾದ ಎಂದರು ನಾಯಕ ಪ್ರವೀಣ್. ನಾಯಕಿ ರಚನಾ ಇಂದರ್ ಸಹ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸಪಟ್ಟರು.
