ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೆಪ್ಟೆಂಬರ್ ನಲ್ಲಿ ಬಿಡುಗಡೆಗೆ ಸಿದ್ದವಾದ ರಾಜ ರಾಣಿ ರೋರರ್ ರಾಕೆಟ್: ರಿಲೀಸ್ ಗೂ ಮುನ್ನವೇ ಟಿಕೇಟ್ ಸೇಲ್
ಮುಂದಿನ ತಿಂಗಳು ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರತಂಡ ವಿನೂತನ ಪ್ರಚಾರಕ್ಕೆ ಮುಂದಾಗಿದೆ. ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕಾರ್ಯಕ್ಕೆ ಚಾಲನೆ ನೀಡಲಾಯಿತು. ಚಿತ್ರದ ಪಾಸ್(ಟಿಕೆಟ್) ಗಳನ್ನು ಈಗಲೇ ನೃತ್ಯಗಾರರಿಗೆ ವಿತರಿಸಲಾಗುತ್ತಿದೆ, ಆ ಕಾರ್ಯಕ್ಕೆ k g f ಖ್ಯಾತಿಯ ನೃತ್ಯ ನಿರ್ದೇಶಕ ಮೋಹನ್ ,dance Karnataka dance ಖ್ಯಾತಿಯ ರುದ್ರ, ಹಾಗೂ ಮತ್ತಿತರ ನೃತ್ಯಗಾರರು ಪ್ರೋತ್ಸಾಹ ನೀಡುತ್ತಿದ್ದಾರೆ ಎನ್ನುತ್ತಾರೆ ನಾಯಕ ಭೂಷಣ್.
ಇತ್ತೀಚೆಗೆ ಸಂಚಿತ್ ಹೆಗಡೆ ಹಾಡಿರುವ ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿದೆ. ಪ್ರಭು ಎಸ್ ಆರ್, ಸಂಗೀತ ನೀಡಿದ್ದಾರೆ.
ಭೂಷಣ್ ಅವರಿಗೆ ನಾಯಕಿಯಾಗಿ ಮಾನ್ಯ ಅಭಿನಯಿಸಿದ್ದಾರೆ. ರಣಧೀರ್, ಸಂತೋಷ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರಂ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
