ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತಷ್ಟು ಮುದ್ದು ಮುದ್ದಾಗಿ ಕಾಣಿಸಿಕೊಂಡ ಆಲಿಯಾ ಭಟ್: ಮತ್ತೆ ವೈರಲ್ ಆಯ್ತು ಬ್ಯೂಟಿಯ ಬೇಬಿ ಬಂಪ್ ಫೋಟೋ
ಸದ್ಯ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ನಟನೆಯ `ಬ್ರಹ್ಮಾಸ್ತ್ರ’ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದ್ದು, ಪ್ರಚಾರದ ಸಂದರ್ಭದಲ್ಲಿ ನಟಿ ಆಲಿಯಾ ಅವರ ಬೇಬಿ ಬಂಪ್ ಲುಕ್ ನೆಟ್ಟಿಗರ ಗಮನ ಸೆಳೆಯುತ್ತಿದೆ. ತಾಯ್ತನದ ಖುಷಿಯಲ್ಲಿರುವ ಆಲಿಯಾ ಭಟ್ ಮತ್ತಷ್ಟು ಮುದ್ದಾಗಿ ಕಾಣಿಸುತ್ತಿದ್ದು ನಟಿಯ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಪತಿ ರಣ್‌ಬೀರ್ ಕಪೂರ್ ಮತ್ತು ನಿರ್ದೇಶಕ ಆಯಾನ್ ಮುಖರ್ಜಿ ಜತೆ ಸಿನಿಮಾ ಪ್ರಚಾರ ಕಾರ್ಯದಲ್ಲಿ ಆಲಿಯಾ ಭಾಗಿಯಾಗಿದ್ದಾರೆ. ಈ ವೇಳೆ ಕ್ಯಾಮೆರಾ ಕಣ್ಣಿಗೆ ಖುಷಿ ಖುಷಿಯಾಗಿ ನಟಿ ಪೋಸ್ ನೀಡಿದ್ದಾರೆ. ಕ್ಯಾಮರಾಗೆ ಫೋಸ್ ಕೊಟ್ಟ ಬಳಿಕ ಆಲಿಯಾರ ಕೈ ಹಿಡಿದು ರಣಬೀರ್ ಮೆಟ್ಟಿಲು ಹತ್ತಿಸುತ್ತಿದ್ದು ಇದಕ್ಕೆ ನೋಡುಗರು ಸೂಪರ್ ಅನ್ನುತ್ತಿದ್ದಾರೆ.
