• January 1, 2026

ಬಿಗ್ ಬಾಸ್ ಗಿಲ್ಲ ಕಾಫಿ ನಾಡು ಚಂದು ಎಂಟ್ರಿ: ಅಸಮಧಾನ ಹೊರ ಹಾಕಿದ ಅಭಿಮಾನಿಗಳು

ಬಿಗ್ ಬಾಸ್ ಕನ್ನಡ ಒಟಿಟಿ ಆಗಸ್ಟ್ 6ರಂದು ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿದೆ. 16 ಮಂದಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದು ಈಗಾಗ್ಲೆ ಆಟ ಶುರುವಾಗಿದೆ. ಆದರೆ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡದೇ ಇರೋದು ಸಾಕಷ್ಟು ಅಭಿಮಾನಿಗಳಿಗೆ ಬೇಸರ ತರಿಸಿದೆ. ನಾನು ಪುನೀತ್ ಶಿವಣ್ಣ ಅಭಿಮಾನಿ. ಕಾಫಿ ನಾಡು ಚಂದು ಎಂದು ಹೇಳುತ್ತಾ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಸ್ಟೈಲ್ ನಲ್ಲಿ ಹುಟ್ಟುಹಬ್ಬದ ಶುಭ ಹಾರೈಸುತ್ತಿದ್ದ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಎಂಟ್ರಿಕೊಡಬೇಕು ಅನ್ನೋದು ಸಾಕಷ್ಟು ಅಭಿಮಾನಿಗಳ ಆಸೆಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಚಂದು ದೊಡ್ಮನೆಗೆ ಎಂಟ್ರಿ ಕೊಡಬೇಕು ಎಂದು ಸಾಕಷ್ಟು ಮಂದಿ ಕೇಳಿ ಕೊಂಡಿದ್ದರು. ಜೊತೆಗೆ ಅವಕಾಶ ಸಿಕ್ಕರೆ ತಾನು ಕೂಡ ಬಿಗ್ ಬಾಸ್ ಮನೆಗೆ ಹೋಗೋದಾಗಿ ಚಂದು ಹೇಳಿಕೊಂಡಿದ್ದರು. ಹೀಗಾಗಿ ಚಂದು ಬಿಗ್ ಬಾಸ್ ಮನೆಯಲ್ಲಿ ಕಾಣೀಸಿಕೊಳ್ತಾರೆ ಅಂತಲೆ ಸಾಕಷ್ಟು ಮಂದಿ ಅಂದುಕೊಂಡಿದ್ದರು. ಬಿಗ್ ಬಾಸ್ ಮನೆಗೆ 16 ಮಂದಿ ಎಂಟ್ರಿಕೊಟ್ಟಿದ್ದು ಕಾಫಿ ನಾಡು ಚಂದು ಮಾತ್ರ ಕಾಣಿಸಿಕೊಂಡಿಲ್ಲ. ಇದರಿಂದ ಬೇಸರಗೊಂಡ ಅಭಿಮಾನಿಗಳು ಕಾಫಿನಾಡು ಚಂದುವಿಗೆ ಯಾಕೆ ಅವಕಾಶ ನೀಡಲಾಗಿಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಅತ್ಯುತ್ತಮ ಮನರಂಜನೆ ನೀಡುತ್ತಿರುವ ಚಂದು ಬಿಗ್​ ಬಾಸ್​ಗೆ ಸೂಕ್ತ ವ್ಯಕ್ತಿ. ಸದ್ಯ ಆಯ್ಕೆಯಾಗಿರುವ ಸ್ಪರ್ಧಿಗಳಿಗಿಂತ ಕಾಫಿ ನಾಡು ಚಂದು ಅತ್ಯುತ್ತಮ ಎಂಟರ್ಟೈನರ್. ಹೀಗಾಗಿ ಕಾಫಿನಾಡು ಚಂದುಗೆ ಅವಕಾಶ ನೀಡಬೇಕಿತ್ತು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now