• June 21, 2026

ಮಿಸ್ ಇಂಡಿಯಾ USA 2022 ಕಿರೀಟ ಮುಡಿಗೇರಿಸಿಕೊಂಡ 18 ವರ್ಷದ ಆರ್ಯ ವಾಲ್ವೇಕರ್

ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 40ನೇ ವಾರ್ಷಿಕೋತ್ಸವ ಸೌಂದರ್ಯ ಸ್ಪರ್ಧೆಯಲ್ಲಿ ವರ್ಜೀನಿಯಾದ 18ರ ಯುವತಿ ಆರ್ಯ ವಾಲ್ವೇಕರ್ `ಮಿಸ್ ಇಂಡಿಯಾ USA-2022′ ಕಿರೀಟ ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದಾರೆ. ಸೌಂದರ್ಯ ಸ್ಪರ್ಧೆಯಲ್ಲಿ  30 ರಾಜ್ಯಗಳಿಂದ 74 ಸ್ಪರ್ಧಿಗಳು ಮಿಸ್ ಇಂಡಿಯಾ ಯುಎಸ್‌ಎ, ಮಿಸೆಸ್ ಇಂಡಿಯಾ ಯುಎಸ್‌ಎ ಹಾಗೂ ಮಿಸ್ ಟೀನ್ ಇಂಡಿಯಾ ಯುಎಸ್‌ಎ ವಿಭಾಗಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ವಾಷಿಂಗ್ಟನ್‌ನ ಅಕ್ಷಿ ಜೈನ್ ಮಿಸೆಸ್ ಇಂಡಿಯಾ ಯುಎಸ್‌ಎ, ನ್ಯೂಯಾರ್ಕ್ ನ ತನ್ವಿ ಗ್ರೂವರ್ ಮಿಸ್ ಟೀನ್ ನ್ಯೂಯಾರ್ಕ್ ಕಿರೀಟ ಧರಿಸಿದರೆ ಭಾರತೀಯ ಅಮೆರಿಕನ್ನರಾದ ಆರ್ಯ ವಾಲ್ಟೇಕರ್ ಮಿಸ್ ಇಂಡಿಯಾ ಕಿರೀಟ ಧರಿಸಿದರು. ಕಿರೀಟ ಗೆದ್ದ ಸಂಭ್ರಮವನ್ನು ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿರುವ ಆರ್ಯ ವಾಲ್ಟೇಕರ್, `ನನ್ನನ್ನು ಬೆಳ್ಳಿ ತೆರೆಯಲ್ಲಿ ನೋಡುವುದು, ಚಲನಚಿತ್ರ ಹಾಗೂ ಟಿವಿಯಲ್ಲಿ ಕೆಲಸ ಮಾಡುವುದು ನನ್ನ ಕನಸಾಗಿತ್ತು’. ಪ್ರಪಂಚದಾದ್ಯಂತ ಇರುವ ಭಾರತೀಯ ಸಮುದಾಯಕ್ಕೆ, ಅವರು ನೀಡಿದ ಸಹಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 18ವರ್ಷದ ಆರ್ಯ ವಾಲ್ವೇಕರ್ ವರ್ಜೀನಿಯಾದ ಬ್ರಿಯಾರ್ ವುಡ್ಸ್ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿನಿ. ಯುಫೋರಿಯಾ ಡ್ಯಾನ್ಸ್ ಸ್ಟುಡಿಯೋದ ಸಂಸ್ಥಾಪಕರಾಗಿರುವ ಆರ್ಯ ವಾಲ್ವೇಕರ್ ಸ್ಥಳೀಯ ಮಕ್ಕಳಿಗೆ ಕಡಿಮೆ ಶುಲ್ಕದಲ್ಲೇ ನೃತ್ಯ ಹೇಳಿಕೊಡುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now