• January 1, 2026

ದರ್ಶನ್ 56ನೇ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ನಾಯಕಿ: ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಅಭಿಮಾನಿಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 56ನೇ ಸಿನಿಮಾಗೆ ಚಾಲನೆ ಸಿಕ್ಕಿದೆ. ದರ್ಶನ್ ಸಿನಿಮಾಗಳು ಅಂದ್ರೆ ಸಾಕಷ್ಟು ನಿರೀಕ್ಷೆ ಇರುತ್ತೆ. ಜೊತೆಗೆ ದರ್ಶನ್ ಗೆ ಜೋಡಿಯಾಗಿ ಯಾರು ನಟಿಸ್ತಾರೆ ಅನ್ನೋ ಕ್ಯೂರಿಯಾಸಿಟಿ ಇರುತ್ತೆ. ಆದರೆ ಇದೀಗ ದರ್ಶನ್ ನಟನೆಯ ಮುಂದಿನ ಸಿನಿಮಾಗೆ ಆಯ್ಕೆಯಾಗಿರೋ ನಟಿಯ ಕುರಿತು ದಾಸನ ಅಭಿಮಾನಿಗಳು ಅಸಮಧಾನ ಹೊರ ಹಾಕಿದ್ದಾರೆ. ಕ್ರಾಂತಿ ಸಿನಿಮಾದ ಬಳಿಕ ದರ್ಶನ್ ನಿರ್ದೇಶಕ ತರುಣ್ ಸುಧೀರ್ ಜೊತೆ ಸಿನಿಮಾ ಮಾಡ್ತಿದ್ದಾರೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಸಾಕಷ್ಟು ಅದ್ದೂರಿಯಾಗಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗೋ ಮೂಲಕ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ. ಆದರೆ ಈ ಬಗ್ಗೆ ಅಭಿಮಾನಿಗಳು ಮಾತ್ರ ಅಸಮಧಾನ ಹೊರ ಹಾಕಿದ್ದಾರೆ. ದರ್ಶನ್ ಗೆ ಜೋಡಿಯಾಗಿ ಮಾಲಾಶ್ರೀ ಪುತ್ರಿಯನ್ನು ಆಯ್ಕೆ ಮಾಡಿರೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಿರ್ದೇಶಕ ತರುಣ್ ಸುಧೀರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ರಾಬರ್ಟ್ ಸಿನಿಮಾಕ್ಕೆ ಆಶಾ ಭಟ್ ರನ್ನು ಕರೆ ತಂದಿರಿ. ಆ ಬಗ್ಗೆ ಖುಷಿ ಇತ್ತು. ಆದರೆ ಇದೀಗ ಆಯ್ಕೆ ಮಾಡಿರುವ ನಟಿಯೂ ದರ್ಶನ್ ಗೆ ಸೂಟ್ ಆಗಲ್ಲ ಅಂತಿದ್ದಾರೆ. ಜೊತೆಗೆ ದರ್ಶನ್ ಗೆ ನಾಯಕಿಯನ್ನು ಆಯ್ಕೆ ಮಾಡಲು ಆಗದಿದ್ದರೆ ನಿರ್ದೇಶಕರು ಯಾಕೆ ಆಗಿದ್ದೀರಿ.  ನಿರ್ದೇಶನ ಬಿಟ್ಟು ಅಸಿಸ್ಟೆಂಡ್ ಡೈರೆಕ್ಟರ್ ಆಗಿ. ಹಿರೋಯಿನ್ ಚೇಂಜ್ ಮಾಡಿ, ಇಲ್ಲವೇ ಸಿನಿಮಾವನ್ನೇ ಸ್ಟಾಪ್ ಮಾಡಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯದಲ್ಲೇ ದರ್ಶನ್ ನಟನೆಯ ಮುಂದಿನ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು ನಿರ್ದೇಶಕರು ನಟಿಯನ್ನು ಬದಲಾಯಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now