ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟ ರೋಹಿತ್ ವಿರುದ್ಧ ಕೊಲೆ ಬೆದರಿಕೆ ಆರೋಪ
ತನ್ನ ಪತ್ನಿ ನಿಶಾ ಜೊತೆ ರೋಹಿತ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಎಂದು ನಿಶಾ ಪತಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನನ್ನ ಸ್ವಂತ ಮನೆಯಿಂದ ನನ್ನನ್ನು ಹೊರ ಹಾಕಿರುವ ನಿಶಾ ತನ್ನೊಂದಿಗೆ ಧಾರವಾಹಿಯಲ್ಲಿ ನಟಿಸುತ್ತಿರುವ ರೋಹಿತ್ ಜೊತೆ ಸಂಬಂಧ ಇರಿಸಿಕೊಂಡಿದ್ದಾಳೆ. ಕಳೆದ ಐದಾರು ತಿಂಗಳಿನಿಂದ ನನ್ನನ್ನು ಮನೆ ಒಳಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ನನ್ನನ್ನು ನಿಶಾ ಮದುವೆ ಆಗಿದ್ದರೂ, ತಾನು ಸಿಂಗಲ್ ಮದರ್ ಎಂದು ಹೇಳಿಕೊಂಡು ನಿಶಾ ತಿರುಗಾಡುತ್ತಿದ್ದಾಳೆ. ನಿಶಾ ಮತ್ತು ರೋಹಿತ್ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದು, ಸಾಕ್ಷಿ ಸಮೇತ ನಾನು ನ್ಯಾಯಾಲಯಕ್ಕೆ ಹೋಗುವೆ ಎಂದಿದ್ದಾರೆ.
