ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಮೀರ್ ಖಾನ್ ನೆಗೆಟಿವಿಟಿ ಮಾಸ್ಟರ್ ಮೈಂಡ್ ಎಂದ ಕಂಗನಾ ರಣಾವತ್
ಈ ವರ್ಷ ಬಿಡುಗಡೆಯಾದ ಮೂರೇ ಮೂರು ಸಿನಿಮಾಗಳು ಬಿಟೌನ್ ನಲ್ಲಿ ಹಿಟ್ ಆಗಿವೆ. ಇದೇ ಕಾರಣಕ್ಕೆ ಅಮೀರ್ ಖಾನ್ ಗೆ ಭಯ ಶುರುವಾಗಿದ್ದು ಹೇಗಾದ್ರು ಮಾಡಿ ಸಿನಿಮಾ ಗೆಲ್ಲಲಿಸಬೇಕು ಎಂದು ಕೊಂಡಿದ್ದಾರೆ. ಇದೇ ಕಾರಣಕ್ಕೆ ಸ್ವತಃ ಅಮೀರ್ ಖಾನ್ ಸಿನಿಮಾದ ಬಗ್ಗೆ ನೆಗೆಟಿವ್ ಸುದ್ದಿ ಹರಡಿಸಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ರೀಮೇಕ್ ಸಿನಿಮಾಗಳು ವರ್ಕ್ ಆಗುವುದಿಲ್ಲ. ಈ ನೆಲದ ಕಥೆ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಸಿನಿಮಾಗಳನ್ನು ಮಾಡಿ ತೋರಿಸಲಿ. ಪಿಕೆ ಸಿನಿಮಾದಲ್ಲಿ ಹಿಂದೂ ದೇವರನ್ನು ಹೀಯಾಳಿಸಿದ್ದು ಈ ಚಿತ್ರವೇ ಸೂಪರ್ ಹಿಟ್ ಎನ್ನುವಂತೆ ಬಿಂಬಿಸಲಾಗುತ್ತಿದೆ. ಅದರಿಂದ ಆಚೆ ಬಂದು ಸಮಾಜಕ್ಕೆ ಉತ್ತಮ ಸಿನಿಮಾ ಕೊಟ್ಟೆ ಎನ್ನುವ ಸಮಾಧಾನ ಅಮೀರ್ ಗೆ ಬರಬೇಕು ಎಂದರು.
ಈ ವರ್ಷ ಬಿಡುಗಡೆಯಾದ ಗಂಗೂಬಾಯಿ ಕಾಥಿಯಾವಾಡಿ, ದಿ ಕಾಶ್ಮೀರ್ ಫೈಲ್ಸ್, ಭೂಲ್ ಭುಲಯ್ಯ ಸಿನಿಮಾಗಳು ಬಾಲಿವುಡ್ ನಲ್ಲಿ ಗೆದ್ದಿವೆ. ದಿ ಕಾಶ್ಮೀರ್ ಫೈಲ್ಸ್ ಸತ್ಯದ ಅನಾವರಣಕ್ಕೆ ಸಾಕ್ಷಿ ಆಯಿತು. ಇನ್ನೊಂದು ಸಿನಿಮಾ ನೈಜ ಕಥೆಯನ್ನು ಆಧರಿಸಿತ್ತು. ಮತ್ತೊಂದು ಕಾಮಿಡಿ. ಕಾಮಿಡಿ ಸಿನಿಮಾವಾಗಿದ್ದರೂ, ಅಲ್ಲಿ ಯಾರ ಮನಸ್ಸಿಗೂ ನೋವನ್ನುಂಟು ಮಾಡುವಂತಹ ಕಥೆ ಇರಲಿಲ್ಲವೆಂದು ನಟ ಅಮೀರ್ ಖಾನ್ ಕಾಲೆಳೆದರು.
