ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತೆರೆಗೆ ಬರಲಿದೆ ಮಾಜಿ ಸಿಎಂ ಸಿದ್ದರಾಮಯ್ಯ ಬಯೋಪಿಕ್
ಈಗಾಗ್ಲೆ ಸಾಕಷ್ಟು ರಾಜಕಾರಣಿಗಳ ಬಯೋಪಿಕ್ ತೆರೆಗೆ ಬಂದಿದೆ. ಇದೀಗ ಸಿದ್ದರಾಮಯ್ಯ ಅವರ ಜೀವನ ಕುರಿತಾದ ಚಿತ್ರ ತೆರೆಗೆ ತರಲು ಶ್ರೀಧರ್ ರಾವ್ ರೆಡಿಯಾಗಿದ್ದಾರೆ.ಈ ಬಗ್ಗೆ ಮಾತನಾಡಿದ ಶ್ರೀಧರ್ ರಾವ್, ‘ಸಿದ್ದರಾಮಯ್ಯನವರ ಅನುಮತಿ ಪಡೆದುಕೊಂಡೇ ಸಿನಿಮಾ ಮಾಡಲಾಗುವುದು. ಇದು ಕನ್ನಡ, ತಮಿಳು, ತೆಲುಗು ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದ್ದು, ದೊಡ್ಡ ಬಜೆಟ್ ನಲ್ಲಿ ಸಿನಿಮಾ ತಯಾರಾಗಲಿದೆ ಎಂದರು. ಸಿದ್ದರಾಮಯ್ಯ ಅವರ ಜೀವನ, ರಾಜಕೀಯ ಎಂಟ್ರಿ, ಮುಖ್ಯಮಂತ್ರಿಯಾದಾಗಿನ ಅವರ ಸಾಧನೆ ಸೇರಿದಂತೆ ಸಾಕಷ್ಟು ವಿಷಯಗಳು ಸಿನಿಮಾದಲ್ಲಿ ಇರಲಿದೆಯಂತೆ
ಸಿನಿಮಾ ರಂಗಕ್ಕೆ ಸಿದ್ದರಾಮಯ್ಯ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇದೇ ಕಾರಣಕ್ಕೆ ಸಿನಿ ರಂಗ ಅವನ್ನು ವಿಭಿನ್ನ ರೀತಿಯಲ್ಲಿ ಸ್ಮರಿಸುತ್ತಿದೆ. ಈಗಾಗಲೇ ಸಿದ್ದರಾಮೋತ್ಸವದಲ್ಲಿ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಹಂಸಲೇಖ ಕೂಡ ಒಂದು ಹಾಡನ್ನು ಸಿದ್ದರಾಮಯ್ಯನವರಿಗೆ ಅರ್ಪಿಸಿದ್ದಾರೆ. ಇದೀಗ ಸಿದ್ದರಾಮಯ್ಯ ಕುರಿತು ಸಿನಿಮಾ ಮಾಡಲು ಶ್ರೀಧರ್ ಮುಂದಾಗಿದ್ದಾರೆ.
