ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಕ್ರಾಂತ್ ರೋಣ ಸಕ್ಸಸ್ ಖುಷಿಯಲ್ಲಿ ಅನೂಪ್ ಭಂಡಾರಿಗೆಕಾರ್ ಗಿಫ್ಟ್ ಮಾಡಿದ ಸುದೀಪ್
ಸೆಟ್ಟೇರಿದ ಮೊದಲ ದಿನದಿಂದಲೂ ವಿಕ್ರಾಂತ್ ರೋಣ ಸಿನಿಮಾ ದಾಖಲೆ ನಿರ್ಮಿಸಿಕೊಂಡು ಬಂದಿದೆ. ಅನೂಪ್ ಭಂಡಾರಿ ಹೇಳಿದ ಗುಮ್ಮನ ಕಥೆಗೆ ಪ್ರೇಕ್ಷಕರು ಜೈಕಾರ ಹಾಕಿದ್ದು ರಿಲೀಸ್ ಆದ ಆರೇ ದಿನದಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸುದೀಪ್ ಗೆ ಯಾರಾದಾದರು ಕೆಲಸ ಇಷ್ಟವಾದರೇ ಅವರಿಗೆ ಉಡುಗೋರೆ ನೀಡೋದು ವಾಡಿಕೆ. ಅಂತೆಯೇ ಅನೂಪ್ ಭಂಡಾರಿ ಕೆಲಸ ಮೆಚ್ಚಿಕೊಂಡಿರೋ ಸುದೀಪ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ನಲ್ಲಿ ಬಿಲ್ಲ ರಂಗ ಬಾಷ ಹಾಗೂ ಅಶ್ವತ್ಥಾಮ ಸಿನಿಮಾದಲ್ಲಿ ಈ ಜೋಡಿಗಳು ಸದ್ಯದಲ್ಲೇ ಒಂದಾಗಲಿದ್ದಾರೆ. ಸದ್ಯ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರೋ ಬಿಗ್ ಬಾಸ್ ಒಟಿಟಿ ಶೋ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದು ಅದು ಮುಗಿದ ಬಳಿಕ ಹೊಸ ಸಿನಿಮಾದ ಅಪ್ ಡೇಟ್ ನೀಡಲಿದ್ದಾರೆ.
