ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಧ್ಯರಾತ್ರಿ ಮನೆಗೆ ಕರೆದಾಗ ಹೋದರೆ ಮಾತ್ರ ಸಿನಿಮಾದಲ್ಲಿ ಚಾನ್ಸ್ ಸಿಗುತ್ತೆ: ಸ್ಟಾರ್ ನಟರ ವಿರುದ್ಧ ಗಂಭೀರ ಆರೋಪ ಮಾಡಿದ ಮಲ್ಲಿಕಾ ಶೆರಾವತ್
‘ಮುಂಜಾನೆ 3 ಗಂಟೆಗೆ ಒಬ್ಬ ನಟ ನಿಮಗೆ ಕರೆ ಮಾಡಿ, ‘ನನ್ನ ಮನೆಗೆ ಬಾ..’ ಎಂದು ಹೇಳಿದರೆ, ನೀವು ಅವರ ವಲಯದಲ್ಲಿ ಇದ್ದರೆ ಮತ್ತು ನೀವು ಅವರ ಸಿನಿಮಾದಲ್ಲಿ ನಟಿಸುತ್ತಿದ್ದರೆ, ನೀವು ಹೋಗಲೇಬೇಕು. ನೀವು ಹೋಗದಿದ್ದರೆ, ಆ ಸಿನಿಮಾದಿಂದ ನೀವು ಹೊರಗುಳಿಯುತ್ತೀರಿ.. ಯಾರೊಬ್ಬರ ಆಸೆ ಮತ್ತು ಕಲ್ಪನೆಗಳಿಗೆ ಒಳಗಾಗಲು ನಾನು ಬಯಸುವುದಿಲ್ಲ..’ ಎಂದು ಹೇಳಿದ್ದಾರೆ.
‘ನಾನು ಸಾಧ್ಯವಾದಷ್ಟು ಒಳ್ಳೆಯ ಪಾತ್ರಗಳನ್ನು ಹುಡುಕಲು ಪ್ರಯತ್ನಿಸಿದೆ. ಎಲ್ಲರೂ ಮಾಡುವಂತೆ ನಾನು ಕೂಡ ಕೆಲವು ತಪ್ಪುಗಳನ್ನು ಮಾಡಿದ್ದೇನೆ. ಕೆಲವು ಪಾತ್ರಗಳು ಚೆನ್ನಾಗಿದ್ದವು, ಕೆಲವು ಚೆನ್ನಾಗಿಲ್ಲ. ಇದು ನಟ-ನಟಿಯ ಪ್ರಯಾಣದ ಭಾಗವಾಗಿದೆ, ಆದರೆ ಒಟ್ಟಾರೆಯಾಗಿ ನನ್ನ ಜರ್ನಿ ಅದ್ಭುತವಾಗಿದೆ…’ ಎಂದು ಮಲ್ಲಿಕಾ ಹೇಳಿದ್ದಾರೆ.
‘ಎಲ್ಲಾ ಎ-ಲಿಸ್ಟರ್ ನಾಯಕರು ನನ್ನೊಂದಿಗೆ ಸಿನಿಮಾ ಮಾಡಲು ನಿರಾಕರಿಸಿದರು. ಏಕೆಂದರೆ ನಾನು ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು. ‘ಇದು ತುಂಬಾ ಸಿಂಪಲ್, ಅವರು ನಿಯಂತ್ರಿಸಬಹುದಾದ ಮತ್ತು ಅವರೊಂದಿಗೆ ರಾಜಿ ಮಾಡಿಕೊಳ್ಳುವ ನಟಿಯರನ್ನು ಮಾತ್ರ ಅವರು ಇಷ್ಟಪಡುತ್ತಾರೆ. ಆದರೆ ನಾನು ಹಾಗಲ್ಲ, ನನ್ನ ವ್ಯಕ್ತಿತ್ವ ಅದಲ್ಲ. ನಾನು ಯಾರೊಬ್ಬರ ಆಸೆ ಮತ್ತು ಅಭಿಮಾನಗಳಿಗೆ ಒಳಗಾಗಲು ಬಯಸುವುದಿಲ್ಲ’ ಎಂದು 45 ವರ್ಷದ ನಟಿ ಮಲ್ಲಿಕಾ ಹೇಳಿದರು.
