ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿವಾದದ ಬೆನ್ನಲ್ಲೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ಪವಿತ್ರಾ ಲೋಕೇಶ್
ಇಷ್ಟೆಲ್ಲಾ ಆದ ಮೇಲೆ ಪವಿತ್ರಾ ಲೋಕೇಶ್ ಗೆ ತೆಲುಗು ಚಿತ್ರರಂಗದಲ್ಲಿ ಭವಿಷ್ಯವಿಲ್ಲ ಎನ್ನಲಾಗಿತ್ತು. ಆದರೆ ಈಗ ಬೇರೆಯದ್ದೇ ಆಗಿದೆ. ಕಳೆದ ವಾರ ಬಿಡುಗಡೆ ಆದ ರಾಮಾರಾವ್ ಆನ್ ಡ್ಯೂಟಿ ಚಿತ್ರದಲ್ಲಿ ನರೇಶ್ ಹಾಗೂ ಪವಿತ್ರಾ ಅಣ್ಣ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಥಿಯೇಟರ್ ನಲ್ಲಿ ಇವರಿಬ್ಬರು ಎಂಟ್ರಿಯಾಗುತ್ತಿದ್ದಂತೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಹಿರೋ ರವಿತೇಜಾ ಎಂಟ್ರಿಗೂ ಸಿನಿ ರಸಿಕರು ಇಷ್ಟೊಂದು ಚಪ್ಪಾಳೆ ಶಿಳ್ಳೆ ಹೊಡೆಯುತ್ತಿಲ್ಲ. ಅಷ್ಟರ ಮಟ್ಟಿಗೆ ಪವಿತ್ರಾ ಹಾಗೂ ನರೇಶ್ ಸುದ್ದಿಯಾಗಿದ್ದಾರೆ.
ಈ ಮಧ್ಯೆ ಟಾಲಿವುಡ್ ನಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ವಿವಾದವನ್ನೇ ಎನ್ ಕ್ಯಾಷ್ ಮಾಡಿಕೊಂಡಿರುವ ಪವಿತ್ರಾ ಲೋಕೇಶ್ ತಮ್ಮ ಸಂಭಾವನ್ನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಇದುವರೆಗೂ ದಿನಕ್ಕೆ 60 ಸಾವಿರ ಪಡೆದುಕೊಳ್ಳುತ್ತಿದ್ದ ಪವಿತ್ರಾ ಲೋಕೇಶ್ ಇದೀಗ ದಿನಕ್ಕೆ 1 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರಂತೆ.
ಪೋಷಕ ಪಾತ್ರಗಳ ಮೂಲಕವೇ ಸಾಕಷ್ಟು ಖ್ಯಾತಿ ಘಳಿಸಿರುವ ಪವಿತ್ರಾ ಲೋಕೇಶ್ ತೆಲುಗು ಇಂಡಸ್ಟ್ರೀಯ ಸ್ವೀಟ್ ಮಮ್ಮಿ ಎಂದೇ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಒಟ್ನಲ್ಲಿ ವಿವಾದದ ಬಳಿಕ ಸಿನಿ ರಂಗದಲ್ಲಿ ಪವಿತ್ರಾ ಲೋಕೇಶ್ ಗೆ ಡಿಮ್ಯಾಂಡ್ ಕಮ್ಮಿಯಾಗುತ್ತೆ ಎಂಬ ಮಾತು ಹುಸಿಯಾಗಿದ್ದು ಇದೇ ಪವಿತ್ರಾ ಲೋಕೇಶ್ ಗೆ ಎನ್ ಕ್ಯಾಷ್ ಆಗಿದೆ.
