• January 1, 2026

ಇನ್ನು ಮುಂದೆ ಆ ಧಾರವಾಹಿಯಲ್ಲಿ ನಟಿಸಲ್ಲ: ಚಂದನ್ ಕುಮಾರ್

ಸ್ಯಾಂಡಲ್ ವುಡ್ ನಟ ಚಂದನ್ ಕುಮಾರ್ ಮೇಲೆ ತೆಲುಗು ಧಾರವಾಹಿ ಚಿತ್ರೀಕರಣದ ವೇಳೆ ಹಲ್ಲೆ ನಡೆದಿದ್ದು ಈ ಕುರಿತು ನಟ ಚಂದನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ನನ್ನ ಮೇಲೆ ನಡೆದ ಹಲ್ಲೆ ಪೂರ್ವ ನಿಯೋಜಿತ. ಇದು ಕನ್ನಡದ ನಟರ ಮೇಲೆ ಅವರಲ್ಲಿರುವ ಅಸಹನೆಯನ್ನು ಸೂಚಿಸುತ್ತದೆ. ಸುಮಾರು ಮೂರು ಗಂಟೆಗಳ ಕಾಲ ನನ್ನನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಮದ ನಿಂದಿಸಿ, ಹಲ್ಲೆ ನಡೆಸಿದರು. ಅದನ್ನು ವಿಡಿಯೋ ಮಾಡಿಕೊಂಡು ಕೆಲವು ದೃಶ್ಯಗಳನ್ನಷ್ಟೇ ಎಡಿಟ್ ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದರು. ‘’ಹೈದರಾಬಾದ್‌ನಲ್ಲಿ ನನ್ನ ಮೇಲೆ ನಡೆದಿರೋ ಹಲ್ಲೆ  ಅನ್ಯಾಯ. ಹೊರಗಿನಿಂದ ಬಂದಿರೋ ಕಾರಣಕ್ಕೆ ಆ ರೀತಿ ನಡೆಸಿಕೊಳ್ಳಬಾರದು. ಘಟನೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದರು. ‘’ಆಗಸ್ಟ್ 1 ರಿಂದ ನಾನು ಶೂಟಿಂಗ್‌ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ಜುಲೈ 29 ರಂದೇ ನನ್ನನ್ನ ಕರೆಯಿಸಿಕೊಂಡರು. ನನ್ನಮ್ಮ ಆಸ್ಪತ್ರೆಯಲ್ಲಿದ್ದರು. ಆದರೂ, ನನ್ನ ಕರ್ತವ್ಯ ಅಂತ ನಾನು ಹೋದೆ. ತುಂಬಾ ಬೇಜಾರಾಯಿತು. ಲಂಚ್ ಬ್ರೇಕ್‌ನಲ್ಲಿ ಊಟ ಮಾಡಿ, ಸ್ವಲ್ಪ ನಿದ್ದೆ ಮಾಡಿದ್ದೆ. 10 ನಿಮಿಷ ನಿದ್ದೆ ಮಾಡಿದ್ದು ಶೂಟಿಂಗ್ ಟೈಮ್‌ ನಲ್ಲಿ ಅಲ್ಲ. ಅಸಿಸ್ಟೆಂಟ್ ಡೈರೆಕ್ಟರ್ ರಂಜಿತ್ ಮತ್ತು ಹರೀಶ್ ನನಗೆ ತುಂಬಾ ಕಿರಿಕಿರಿ ಮಾಡುತ್ತಿದ್ದರು. ಡಬಲ್ ಮೀನಿಂಗ್‌ನಲ್ಲಿ ಏನೇನೋ ಮಾತನಾಡುತ್ತಿದ್ದರು. ಬೇಕು ಬೇಕು ಅಂತ ಕೆಣಕುತ್ತಿದ್ದರು. ನಾನು  ‘’ಶಾಟ್ ರೆಡಿ ಆಯ್ತಾ’’ ಅಂತ ಕೇಳಿದೆ. ‘’5 ನಿಮಿಷ ಅಂದೋನು 30 ನಿಮಿಷ ಅಗಿದೆ ಎಬ್ಸೋ’’ ಎಂದು ಏಕವಚನದಲ್ಲಿ ನನ್ನನ್ನ ಕರೆದ. ಅವನು ನನಗಿಂತ ಚಿಕ್ಕವನು. ಹೀಗೆಲ್ಲಾ ಮಾತನಾಡಬೇಡ ಅಂತ ನಾನು ಹೇಳಿದೆ. ಹೋಗೋ 10 ನಿಮಿಷ ಅಂತ ನಾನು ತಳ್ಳಿದೆ. ಇದು ತುಂಬಾ ಚಿಕ್ಕ ಮ್ಯಾಟರ್. ಇದನ್ನ ಹೋಗಿ ಅವನು ಬೇರೆ ತರಹ ಹೇಳಿದ್ದಾನೆ. ನಾನು ಹೊಡೆದೆ ಅಂತ ಕಣ್ಣೀರು ಹಾಕಿ ನಾಟಕ ಮಾಡಿದ್ದಾನೆ. ನಾನು ತಳ್ಳೋದಕ್ಕೂ ಕಾರಣ ಇದೆ. ನಮ್ಮಿಬ್ಬರ ನಡುವೆ ತುಂಬಾ ಸಲುಗೆ ಇತ್ತು. ಹೀಗಾಗಿ, ನಾನು ಸುಮ್ಮನೆ ತಳ್ಳಿದೆ. ಆದರೆ, ಅದಕ್ಕೆ ಬೇರೆ ರೂಪ ಕೊಟ್ಟಿದ್ದಾರೆ ಎಂದು ಬೇಸರ ಹೊರ ಹಾಕಿದರು. ಅಲ್ಲಿ ನಾನೊಬ್ಬನ್ನೆ ಇದ್ದೆ, ಅವರು ಗ್ಯಾಂಗ್ ಕಟ್ಟಿಕೊಂಡು ಬಂದರು. ತುಂಬಾ ರಾಂಗ್ ಆಗಿ ಎಲ್ಲರೂ ಮಾತನಾಡಿದರು. ಅವಮಾನ ಮಾಡಿ ವಾಪಸ್ ಕಳುಹಿಡಬೇಕು ಎಂದು ಮಾತನಾಡಿದರು, ನಾವು ಬೇರೆ ರಾಜ್ಯದವರು ಅನ್ನೋ ಕಾರಣಕ್ಕೆ ನನ್ನ ಮೇಲೆ ತಪ್ಪು ಬಂತು. ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನನಗೆ ಅಲ್ಲಿ ಸೇಫ್ಟಿ ಇಲ್ಲ. ಆ ಧಾರವಾಹಿಯಲ್ಲಿ ಖಂಡಿತ ನಾನು ಮುಂದುವರೆಯಲ್ಲ. ಕನ್ನಡ ನಟನಿಗೆ ಹೊಡೆದಿರುವುದಕ್ಕೆ ಅವನು ಕ್ಷಮೆ ಕೇಳಬೇಕು. ಹೊಡೆಯುವಾಗ ಬೇರೆ ಯಾರೂ ಅವನನ್ನ ತಡೆಯಲಿಲ್ಲ. ಇದನ್ನ ನೋಡಿದ್ರೆ, ನನಗೆ ಪ್ರೀ-ಪ್ಲಾನ್ಡ್ ಅನ್ಸತ್ತೆ ಎಂದರು.    

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now