ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪೆಟ್ರೋಮ್ಯಾಕ್ಸ್ ಸಿನಿಮಾದ ಸೋಲಿನ ಹೊಣೆ ಹೊತ್ತುಕೊಂಡ ವಿಜಯ್ ಪ್ರಸಾದ್: ನಿರ್ದೇಶಕ ನಡೆಗೆ ಮೆಚ್ಚುಗೆ ಮಹಾಪೂರ
ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಸೋಲಿನ ಬಗ್ಗೆ ಬರೆದುಕೊಂಡ ನಿರ್ದೇಶಕ ವಿಜಯ್ ಪ್ರಸಾದ್, ‘ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ. ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲ. ಹಾಗೆ ನಮ್ಮ ಚಿತ್ರತಂಡದ ಯಾರೊಬ್ಬರೂ ಅಲ್ಲ. ಇದಕ್ಕೆ ಕಾರಣ ನಾನೊಬ್ಬನೇ. ಕ್ಷಮೆ ಇರಲಿ’ ಎಂದು ಬರೆದುಕೊಂಡಿದ್ದರು.
ವಿಜಯ್ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾದ ಸೋಲಿನ ಹೊಣೆ ಹೊತ್ತುಕೊಳ್ಳುತ್ತಿದ್ದಂತೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಸೋತಿದ್ರು ವಾರದೊಳಗೆ ಪ್ರೆಸ್ ಮೀಟ್ ಮಾಡಿ ಸೂಪರ್ ಸಕ್ಸಸ್ ಆಗಿದೆ ಎಂದು ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ ಎನ್ನುವವರೆ ಹೆಚ್ಚು. ಅಂಥದರಲ್ಲಿ ಸಿನಿಮಾದ ಸೋಲಿನ ಹೊಣೆ ಹೊತ್ತುಕೊಂಡ ನೀವು ಗ್ರೇಟ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ ನಿಮ್ಮ ಮುಂದಿನ ಸಿನಿಮಾ ಅದ್ಭುತ ಯಶಸ್ಸು ಕಾಣಲಿ ಎಂದು ಹಾರೈಸುತ್ತಿದ್ದಾರೆ. ಸದ್ಯ ವಿಜಯ್ ಪ್ರಸಾದ್ ತೋತಾಪುರಿ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಜಗ್ಗೇಶ್ ಹಾಗೂ ವಿಜಯ್ ಪ್ರಸಾದ್ ಕಾಂಬಿನೇಷನ್ ಎರಡನೇ ಸಿನಿಮಾವಾಗಿರೋ ತೋತಾಪುರಿ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಎರಡು ಭಾಗಗಳಲ್ಲಿ ತೋತಾಪುರಿ ಸಿನಿಮಾ ಬಿಡಗುಡೆ ಆಗುತ್ತಿದ್ದು ಈಗಾಗ್ಲೆ ಟ್ರೈಲರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆ ಮೂಡಿಸಿದೆ.ನಮ್ಮ ಪೆಟ್ರೋಮ್ಯಾಕ್ಸ್ ಚಿತ್ರ ನಾವು ಅಂದುಕೊಂಡಂತೆ ಎಲ್ಲರನ್ನೂ ತಲುಪಲು ಆಗಲಿಲ್ಲ..! ಅದಕ್ಕೆ ಕಾರಣ ಖಂಡಿತವಾಗಿಯೂ ನೀವಂತೂ ಅಲ್ಲವೇ ಅಲ್ಲ ಹಾಗೆ ನಮ್ಮ ಚಿತ್ರತಂಡದ ಯಾರೋಬ್ಬರೂ ಅಲ್ಲ…! ಇದಕ್ಕೆ ಕಾರಣ ನಾನೋಬ್ಬನೇ..! ಕ್ಷಮೆ ಇರಲಿ 🙏 pic.twitter.com/nSGlzLtkkj
— M.C.Vijayaprasad (@Vijayaprasad72) July 31, 2022
