• March 14, 2026

ನಮ್ಮ ಕಣ್ಣುಗಳು ತಂಪಾಗಲಿ ಬಿಡಿ: ರಣಬೀರ್ ನ್ಯೂಡ್ ಫೋಟೋಗೆ ಪ್ರತಿಕ್ರಿಯಿಸಿದ ವಿದ್ಯಾ ಬಾಲನ್

ಎಲ್ಲೆ ಹೋದರು ಬಂದರು ವಿಭಿನ್ನವಾಗಿ ಡ್ರಸ್ ಮಾಡಿಕೊಂಡು ಸುದ್ದಿಯಾಗುತ್ತಿದ್ದ ನಟ ರಣವೀರ್ ಸಿಂಗ್ ಇದೀಗ ಬಟ್ಟೆ ಧರಿಸದೆ ಫೋಟೋ ಶೂಟ್ ಮಾಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ರಣವೀರ್ ವಿರುದ್ಧ ದೂರು ಕೂಡ ದಾಖಲಾಗಿದೆ. ರಣವೀರ್ ನ್ಯೂಡ್ ಫೋಟೋ ಕುರಿತು ಸಾಕಷ್ಟು ಸೆಲೆಬ್ರಿಟಿಗಳು ಸಾಕಷ್ಟು ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಇದೀಗ ನಟಿ ವಿದ್ಯಾ ಬಾಲನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ವಿದ್ಯಾ ಬಾಲನ್ ಹಾಜರಾಗಿದ್ದರು. ಈ ವೇಳೆ ಪತ್ರಕರ್ತರು ರಣವೀರ್ ಸಿಂಗ್ ನ್ಯೂಡ್ ಫೋಟೋ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವಿದ್ಯಾ ಬಾಲನ್ ನಮ್ಮ ಕಣ್ಣುಗಳು ಕೂಡ ತಂಪಾಗಲಿ ಬಿಡಿ ಎಂದು ತಮಾಷೆ ಮಾಡಿದ್ದಾರೆ. ರಣವೀರ್ ಸಿಂಗ್ ಆ ರೀತಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರೆ ಅದರಲ್ಲಿ ಸಮಸ್ಯೆ ಏನಿದೆ? ಮೊದಲ ಬಾರಿಗೆ ಒಬ್ಬ ಪುರುಷ ಈ ರೀತಿ ಮಾಡಿದ್ದಾನೆ. ನಮ್ಮ ಕಣ್ಣುಗಳು ಕೂಡ ತಂಪಾಗಲಿ ಬಿಡಿ. ಕೆಲವರಿಗೆ ಮಾಡಲು ಕೆಲಸವಿಲ್ಲ. ಅಂಥವರು ಕೇಸ್ ಹಾಕಿಕೊಂಡು ಸಮಯ ಹಾಳ ಮಾಡುತ್ತಿದ್ದಾರೆ. ನಿಮಗೆ ಆ ಫೋಟೋ ಇಷ್ಟ ಆಗಿಲ್ಲ ಎಂದರೆ ಅದನ್ನು ಎಸೆದು ಬಿಡಿ. ನಿಮಗೆ ಏನು ಅನಿಸುತ್ತೋ ಅದನ್ನು ಮಾಡಿ. ಅದಕ್ಕೆಲ್ಲ ಎಫ್ ಐ ಆರ್ ಯಾಕೆ ? ಎಂದು ವಿದ್ಯಾ ಬಾಲನ್ ಪ್ರಶ್ನಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now