• March 18, 2026

ಮದುವೆಯಾಗಿ ಏಳು ವರ್ಷದ ಬಳಿಕ ಗುಡ್ ನ್ಯೂಸ್ ನೀಡಿದ ಸ್ಟಾರ್ ಜೋಡಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಟೌನ್ ಬ್ಯೂಟಿ

ಬಾಲಿವುಡ್​ ನ ಮುದ್ದಾದ ಜೋಡಿಗಳಲ್ಲಿ ಒಂದಾದ ನಟಿ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬರೋಬ್ಬರಿ 7 ವರ್ಷಗಳು ಕಳೆದಿದ್ದು, ಇದೀಗ ಈ ಜೋಡಿಗಳ ಕಡೆಯಿಂದ ಸಂತಸದ ಸುದ್ದಿಯೊಂದು ಕೇಳಿ ಬಂದಿದೆ. 2015ರಲ್ಲಿ ಅಲೋನ್ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಬಳಿಕ ರಿಯಲ್ ಲೈಫ್ ನಲ್ಲೂ ಒಂದಾದರು. ಇದೀಗ ಈ ದಂಪತಿಗಳ ಜೀವನದಲ್ಲಿ ಹೊಸ ಅಥಿತಿಯ ಆಗಮನವಾಗುತ್ತಿದ್ದು, ಸದ್ಯದಲ್ಲೇ ಈ ಖುಷಿಯ ವಿಷಯವನ್ನು ದಂಪತಿಗಳು ಅಧಿಕೃತ ಪಡಿಸಲಿದ್ದಾರೆ. ಸದ್ಯ ವಿಷಯ ತಿಳಿದು ಸೆಲೆಬ್ರಿಟಗಳು ಹಾಗೂ ಅಭಿಮಾನಿಗಳು ಈ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾರೆ. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ಇಬ್ಬರೂ ಪರದೆಯ ಮೇಲೆ ದೀರ್ಘಕಾಲ ಕಾಣಿಸಿಕೊಂಡಿಲ್ಲ. ಕರಣ್ ಕೊನೆಯದಾಗಿ ಟಿವಿ ಧಾರಾವಾಹಿ ‘ಕುಬೂಲ್ 2.0’ ನಲ್ಲಿ ಕಾಣಿಸಿಕೊಂಡಿದ್ದರೆ, ಬಿಪಾಶಾ ‘ಡೇಂಜರಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಕರಣ್ ಸಿಂಗ್ ಗ್ರೋವರ್ ಅವರನ್ನು ಮದುವೆಯಾಗುವ ಮೊದಲು ಬಿಪಾಶಾ ಬಸು ಅವರು ಡಿನೊ ಮೊರಿಯಾ ಹಾಗೂ ಜಾನ್ ಅಬ್ರಾಹಂ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು. ಇವರ ಜತೆ ಬ್ರೇಕಪ್​ ಆದ ಬಳಿಕ ಕರಣ್​ ಸಿಂಗ್​ ಗ್ರೋವರ್ ಅವರನ್ನು ಮದುವೆಯಾಗಿ ಇದೀಗ ಫರ್ಸನಲ್ ಲೈಫ್ ನಲ್ಲಿ ಬ್ಯುಸಿಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now