ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಲ್ಮಾನ್ ಖಾನ್ ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಸುದೀಪ್
ಸದ್ಯ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ಈ ಸಿನಿಮಾವನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಪ್ರಸೆಂಟ್ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್ ಹಾಗೂ ಸಲ್ಮಾನ್ ಕಾಂಬಿನೇಷನ್ ನ ಮುಂದಿನ ಸಿನಿಮಾ ಯಾವುದು ಅನ್ನೋ ಪ್ರಶ್ನೆಗೆ ಸುದೀಪ್ ಉತ್ತರಿಸಿದ್ದಾರೆ.
‘ಕಳೆದ ವರ್ಷವೇ ಇದಕ್ಕೆ ಪ್ರಕ್ರಿಯೆ ಆರಂಭ ಆಗಿದೆ. ನೀವು ಇನ್ನೂ ಸ್ವಲ್ಪ ಸಮಯ ಇದಕ್ಕಾಗಿ ಕಾಯಬೇಕಾಗುತ್ತದೆ. ನಾನು ಸಲ್ಮಾನ್ ಖಾನ್ ಅವರಿಗೆ ಕಥೆ ಹೇಳಬೇಕು. ಅವರು ಅದಕ್ಕೆ ಓಕೆ ಹೇಳಬೇಕು. ನಂತರ ಅವರು ಸೆಟ್ಗೆ ಬರಬೇಕು. ನಾವು ಈ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ. ಅವರು ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಇದ್ದಾರೆ. ಸರಿಯಾದ ಸಮಯಕ್ಕೆ ಎಲ್ಲವೂ ಆಗಲಿದೆ’ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಸದ್ಯದಲ್ಲೇ ಸುದೀಪ್ ನಿರ್ದೇಶನಕ್ಕೆ ಇಳಿಯಲ್ಲಿದ್ದು ಸಲ್ಮಾನ್ ಜೊತೆ ಸಿನಿಮಾ ಮಾಡೋದು ಕನ್ಪಾರ್ಮ್ ಆಗಿದೆ.
