ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಕ್ರಾಂತ್ ರೋಣನ ಬಗ್ಗೆ ಅಪಪ್ರಚಾರ: ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು
ಕೆಲವರು ವಿಕ್ರಾಂತ್ ರೋಣ ಸಿನಿಮಾ ಚೆನ್ನಾಗಿಲ್ಲ. ರಿಲೀಸ್ ಗೂ ಮುನ್ನ ಕೊಟ್ಟಷ್ಟು ಬಿಲ್ಡಪ್ ಸಿನಿಮಾದಲ್ಲಿಲ್ಲ. ಇದೊಂದು ಡಬ್ಬಾ ಸಿನಿಮಾ ಎಂದೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಇದರಿಂದ ಸುದೀಪ್ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಸಿನಿಮಾದ ರಿವ್ಯೂ ಹೆಸರಿನಲ್ಲಿ ಸಿನಿಮಾದ ಬಗ್ಗೆ ಇಲ್ಲ ಸಲ್ಲದ್ದು ಬರೆದು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ.
ಇದು ಇದೇ ಮೊದಲಲ್ಲ. ಈ ಹಿಂದೆ ತೆರೆಗೆ ಬಂದ ಪೈಲ್ವಾನ್ ಸಿನಿಮಾದಲ್ಲೂ ಇದೇ ರೀತಿ ಆಗಿತ್ತು. ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಪೈರಸಿ ಮಾಡಲಾಗಿತ್ತು. ಈ ವೇಳೆ ಪೈರಸಿ ಮಾಡಿ ಹಂಚಿದ್ದ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಬೇರೊಬ್ಬ ಸ್ಟಾರ್ ನಟನ ಅಭಿಮಾನಿ ಅನ್ನೋದು ತಿಳಿದು ಬಂದಿತ್ತು. ಇದೀಗ ಮತ್ತೆ ವಿಕ್ರಾಂತ್ ರೋಣ ಸಿನಿಮಾದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದು ಇದರಿಂದ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
