ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪುನೀತ್ ರಾಜ್ ಕುಮಾರ್ ಅಗಲಿ 9 ತಿಂಗಳು: ಸಮಾಧಿಗೆ ಪೂಜೆ ಸಲ್ಲಿಸಿ ಭಾವುಕರಾದ ಕುಟುಂಬ ಸದಸ್ಯರು
ಪುನೀತ್ ಅಗಲಿ 9 ತಿಂಗಳು ಕಳೆದಿರೋ ಹಿನ್ನೆಲೆಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಧೀರನ್ ಹಾಗೂ ಕುಟುಂಬದ ಹಲವು ಸದಸ್ಯರು ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಅಪ್ಪು ಅವರ ಇಷ್ಟ ಪಡುತ್ತಿದ್ದ ಹಲವು ತಿಂಡಿ, ತಿನಿಸುಗಳನ್ನಿಟ್ಟು ಪೂಜೆ ಸಲ್ಲಿಸಿದ್ದು ಈ ವೇಳೆ ಸಾಕಷ್ಟು ಅಭಿಮಾನಿಗಳು ಕೂಡ ಹಾಜರಿದ್ದರು.
ಒಂಬತ್ತು ತಿಂಗಳ ಪೂಜೆಗಾಗಿ ಅಪ್ಪು ಸಮಾಧಿಯನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಜೊತೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೂ ಕೂಡ ಪೂಜೆ ಸಲ್ಲಿಸಲಾಯಿತು.
