• March 14, 2026

ಚಿತ್ರೀಕರಣದ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಗಂಭೀರ ಗಾಯ

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಸಂಯುಕ್ತಾ ಹೆಗ್ಡೆ ಬಳಿಕ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಒಂದರ ಹಿಂದೊಂದಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಸಂಯುಕ್ತ ಸಿನಿಮಾದ ಚಿತ್ರೀಕರಣದ ವೇಳೆ ಪೆಟ್ಟು ಮಾಡಿಕೊಂಡಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಹೆಸರು ಮಾಡುತ್ತಿರುವ ಸಂಯುಕ್ತ ಹೆಗ್ಡೆ ಸದ್ಯ ಕ್ರೀಮ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಫೈಟಿಂಗ್ ಸೀಕ್ವೇನ್ಸ್ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ಡ್ಯೂಪ್ ಬಳಸಿ ಚಿತ್ರೀಕರಣ ಮಾಡುವಂತೆ ಚಿತ್ರತಂಡ ಕೇಳಿಕೊಂಡಿತ್ತು. ಆದರೆ ಅದಕ್ಕೆ ಸಂಯುಕ್ತ ಒಪ್ಪದಿದ್ದಾಗ ಚಿತ್ರತಂಡ ರಿಯಲ್ ಆಗಿಯೇ ಚಿತ್ರೀಕರಿಸಲು ಮುಂದಾಗಿತ್ತು. ಈ ವೇಳೆ ಸಂಯುಕ್ತ ಹೆಗ್ಡೆಗೆ ಪೆಟ್ಟಾಗಿದೆ. ನಟಿಯ ಕಾಲು ಟ್ವಿಸ್ಟ್ ಆಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಭಿಷೇಕ್ ಬಸಂತ್ ನಿರ್ದೇಶನದ ʻಕ್ರೀಮ್ʼ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಸೇರಿದಂತೆ ಇಡೀ ಚಿತ್ರತಂಡವೇ ಡ್ಯೂಪ್ ಬಳಸಿ ಚಿತ್ರೀಕರಿಸಲು ಒತ್ತಾಯಿಸಿತ್ತು. ಆದರೆ ಇದಕ್ಕೆ ಸಂಯುಕ್ತಾ ನಿರಾಕರಿಸಿದ್ದರು. ಸದ್ಯ ಸಂಯುಕ್ತ ಹೆಗ್ಡೆ ಗಾಯಗೊಂಡಿದ್ದರಿಂದ ಶೂಟಿಂಗ್ ಮುಂದೂಡಲಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now