• January 1, 2026

ಸುದೀಪ್ ಧ್ವನಿ ಕೇಳಿದರೆ ಭಯವಾಗುತ್ತದೆ: ನಾಗಾರ್ಜುನ್

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರೋಕೆ ಇನ್ನೆರಡು ದಿನ ಮಾತ್ರವೇ ಭಾಕಿ ಇದೆ. ಈಗಾಗ್ಲೆ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯುಸಿಯಾಗಿದೆ. ಮುಂಬೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ವಿಕ್ರಾಂತ್ ರೋಣ ಚಿತ್ರತಂಡ ಪ್ರೀ ರಿಲೀಸ್ ಈವೆಂಟ್ ಗಳನ್ನು ಮಾಡುತ್ತಿದೆ. ಮುಂಬೈನಲ್ಲಿ ಸುದೀಪ್ ಗೆ ಸಲ್ಮಾನ್ ಖಾನ್ ಸಾಥ್ ನೀಡುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಉಪೇಂದ್ರ ಬೆನ್ನಿಗೆ ನಿಂತಿದ್ದಾರೆ. ಇನ್ನೂ ಹೈದರಾಬಾದ್ ನಲ್ಲಿ ಸುದೀಪ್ ಗೆ ನಾಗಾರ್ಜನ್ ಸಪೋರ್ಟ್ ಮಾಡುತ್ತಿದ್ದಾರೆ. ಸುದೀಪ್ ಹಾಗೂ ನಾಗಾರ್ಜುನ್ ಮೊದಲಿನಿಂದಲೂ ಉತ್ತಮ ಸ್ನೇಹಿತರು. ಈ ಹಿಂದೆ ಸುದೀಪ್ ನಟನೆಯ ‘ಈಗ’ ಸಿನಿಮಾ ತೆರೆಕಂಡ ಸಂದರ್ಭದಲ್ಲಿ ನಾಗಾರ್ಜುನ್ ಕರೆ ಮಾಡಿ ಸುದೀಪ್ ಗೆ ವಿಶ್ ಮಾಡಿದ್ದರು. ಇದೀಗ ವಿಕ್ರಾಂತ್ ರೋಣನಿಗೆ ನಾಗಾರ್ಜನ್ ಸಾಥ್ ನೀಡುತ್ತಿದ್ದಾರೆ. ಹೈದರಾಬಾದ್ ನಲ್ಲಿ ನಡೆದ ವಿಕ್ರಾಂತ್ ರೋಣ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಾಗಾರ್ಜುನ್, ಸುದೀಪ್ ಅವರಿಗೆ ಅದ್ಭುತವಾದ ವಾಯ್ಸ್ ಇದೆ. ಈ ವಾಯ್ಸ್ ಕೇಳಿದರೆ ನನಗೆ ಭಯವಾಗುತ್ತದೆ. ವಿಕ್ರಾಂತ್ ರೋಣ ವೇದಿಕೆಯ ಮೇಲೆ ಇರುವುದಕ್ಕೆ ತುಂಬಾನೇ ಖುಷಿಯಾಗುತ್ತಿದೆ ಎಂದರು. ” ಸುದೀಪ್ ಕನ್ನಡ ಹುಡುಗ ಅಲ್ಲ. ನಮ್ಮ ತೆಲುಗು ಹುಡುಗ. ಅವರು ಹೈದರಾಬಾದ್‌ನವರು. ಅವರು ಇಲ್ಲೇ ಇರುತ್ತಾರೆ. ಸುದೀಪ್ ತುಂಬಾ ದೊಡ್ಡ ಸಿನಿಮಾ ಮಾಡುತ್ತಿದ್ದಾರೆ ಅನ್ನುವುದಲ್ಲ. ಈಗಾಗಲೇ ಎಲ್ಲಾ ಭಾಷೆಯಲ್ಲೂ ಸುದೀಪ್ ಸಿನಿಮಾ ಟ್ರೈ ಮಾಡಿದ್ದಾರೆ. ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ನಟಿಸಿದ್ದೀರಿ ಎಂದು ಗೊತ್ತಿದೆ. ಮಲಯಾಳಂ ಕೂಡ ಮಾಡುತ್ತಿದ್ದೀರ ಎಂದು ನಾನು ಕೇಳಿಪಟ್ಟಿದ್ದೇನೆ. ಈಗಾಗಲೇ ಸುದೀಪ್ ಭಾರತದಾದ್ಯಂತ ಎಲ್ಲರಿಗೂ ಗೊತ್ತಿದೆ. ಈಗ ವಿಕ್ರಾಂತ್ ರೋಣ ಮೂಲಕ ಮತ್ತೆ ಒಂದೇ ಸಿನಿಮಾ ಮೂಲಕ ಎಲ್ಲಾರಿಗೂ ಪರಿಚಿತರಾಗಲಿದ್ದಾರೆ.” ಎಂದು ಕಿಚ್ಚನಿಗೆ ಶುಭ ಹಾರೈಸಿದ್ದಾರೆ. ಈಗಾಗ್ಲೆ ಟ್ರೈಲರ್ ನೋಡಿ ಸಾಕಷ್ಟು ಇಷ್ಟ ಪಟ್ಟಿದ್ದೇನೆ. 3ಡಿಯಲ್ಲಿ ಸಿನಿಮಾ ನೋಡಿ ಸಾಕಷ್ಟು ದಿನಗಳಾಗಿದೆ. ಇದೀಗ ವಿಕ್ರಾಂತ್ ರೋಣ ಸಿನಿಮಾವನ್ನು 3ಡಿಯಲ್ಲಿ ನೋಡುತ್ತೇನೆ ಎಂದರು. ತೆಲುಗು ಜನ ತುಂಬಾ ಒಳ್ಳೆಯವರು, ಬೇರೆ ಪ್ರೇಕ್ಷಕರ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮವರಿಗೆ ಸಿನಿಮಾ ಇಷ್ಟ ಆಯ್ತು ಅಂದರೆ ಅದನ್ನು ಮುಗಿಲೆತ್ತರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಈ ಉದಾರ ಭಾವವನ್ನು ನೀವು ಶೀಘ್ರದಲ್ಲೇ  ನೋಡುತ್ತೀರಾ ಎಂದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now