ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೊಲೆ ಯತ್ನ ಆರೋಪ: ಮಲಯಾಳಂ ನಟನ ಬಂಧನ
ಅಲಪ್ಪುಳ ನಿವಾಸಿ ಅಲೆಕ್ಸ್ ಎಂಬುವವರ ಮೇಲೆ ವಿನೀತ್ ಥಾಟಿಲ್ ಜುಲೈ 24ರಂದು ಹಲ್ಲೆ ನಡೆಸಿದ್ದರು.ಗಂಭೀರವಾಗಿ ಗಾಯಗೊಂಡಿದ್ದ ಅಲೆಕ್ಸ್, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗಾಯಗೊಂಡಿರುವ ಅಲೆಕ್ಸ್ ನಟ ವಿನೀತ್ ಥಾಟಿಲ್ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿದ್ದರು. ಅಲೆಕ್ಸ್ ನೀಡಿದ ದೂರಿನ ಮೇರೆಗೆ ಪೊಲೀಸರು ವಿನೀತ್ ರನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ವಿನೀತ್ ಥಾಟಿಲ್ ಅಲೆಕ್ಸ್ ರಿಂದ ಹಣ ಪಡೆದುಕೊಂಡಿದ್ದರು. ಅದನ್ನು ಮರಳಿ ಕೇಳಲು ಹೋದ ಸಂದರ್ಭದಲ್ಲಿ ಅಲೆಕ್ಸ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ನಟ ವಿನೀತ್ ಥಾಟಿಲ್ ಅಯ್ಯಪ್ಪನುಂ ಕೋಶಿಯುಂ, ಅಂಗಮಲ್ಲಿ ಡೈರೀಸ್, ಆಡು 2 ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
