• January 1, 2026

ನಟನೆಯಿಂದ ಬ್ರೇಕ್ ಪಡೆದುಕೊಳ್ಳುತ್ತಿದ್ದಾರೆ ನಿತ್ಯಾ ಮೆನನ್: ಕಾರಣ ತಿಳಿಸಿದ ‘ಮೈನಾ’ ಬೆಡಗಿ

ನಟಿ ನಿತ್ಯಾ ಮೆನನ್ ಕುರಿತಾಗಿ ಕಳೆದ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದೆ. ನಿತ್ಯ ಮೆನನ್ ಸದ್ಯದಲ್ಲೇ ಸ್ಟಾರ್ ನಟರ ಜೊತೆ ಹಸೆಮಣೆ ಏರುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಸಿನಿಮಾ ರಂಗದಿಂದ ಬ್ರೇಕ್ ಪಡೆದುಕೊಳ್ಳುತ್ತಾರೆ ಎನ್ನಲಾಗಿತ್ತು. ಇದೀಗ ಈ ಬಗ್ಗೆ ವಿಡಿಯೋ ಮೂಲಕ ನಿತ್ಯಾ ಮೆನನ್ ಸ್ಪಷ್ಟನೆ ನೀಡಿದ್ದಾರೆ. ಕನ್ನಡದ 7ಓ ಕ್ಲಾಕ್ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ರಮ್ಯಾ ಬಳಿಕ ಮಲಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ತೊಡಗಿಕೊಂಡರು. ಒಂದರ ಹಿಂದೊದಂರಂತೆ ಹಿಟ್ ಸಿನಿಮಾಗಳಲ್ಲಿ ನಟಿಸುತ್ತಿರುವ ನಿತ್ಯಾ ಮೆನನ್ ಈ ಮಧ್ಯೆ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಡಿತ್ತು.ಈ ಬಗ್ಗೆ ನಟಿ ನಿತ್ಯಾ ಮೆನನ್ ಉತ್ತರ ನೀಡಿದ್ದಾರೆ. ನಾನು ಸದ್ಯಕ್ಕೆ ಮದುವೆ ಆಗುತ್ತಿಲ್ಲ. ಸದ್ಯ ಹರಿದಾಡುತ್ತಿರುವ ಸುದ್ದಿಯಲ್ಲ ಸತ್ಯವಿಲ್ಲ. ನನ್ನ ಮದುವೆಯ ಬಗ್ಗೆ ಸ್ಪಷ್ಟನೆ ಪಡೆಯದೇ ಸುದ್ದಿ ಪ್ರಕಟಿಸಿದ್ದಾರೆ. ಮದುವೆ ವಿಚಾರದಲ್ಲಿ ನನ್ನದು ಸದ್ಯಕ್ಕಂತೂ ಯಾವುದೇ ಪ್ಲ್ಯಾನ್ ಇಲ್ಲ ಎಂದಿದ್ದಾರೆ. ನಾನು ನಟನೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ. ಒಂದಷ್ಟು ಸಿನಿಮಾ ಮಾಡಿದ ಮೇಲೆ ಒಂದು ಬ್ರೇಕ್ ಪಡೆದುಕೊಳ್ಳುತ್ತೇನೆ. ರೋಬೋಟ್ ರೀತಿ ಕೆಲಸ ಮಾಡಲು ನನಗೆ ಸಾಧ್ಯವಿಲ್ಲ. ಹೀಗಾಗಿ ಒಂದು ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಕಳೆದ ಒಂದು ವರ್ಷದಿಂದ ಸಾಕಷ್ಟು ಕೆಲಸ ಮಾಡಿದ್ದು, ಐದಾರು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಈ ಸಿನಿಮಾಗಳಿಗಾಗಿ ನಾನು ನಿತ್ಯ ಕೆಲಸ ಮಾಡಿದ್ದೇನೆ. ಹೀಗಾಗಿ ನನಗೆ ಒಂದು ಬ್ರೇಕ್ ಬೇಕಿದೆ ಎಂದು ನಿತ್ಯಾ ಮೆನನ್ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now