• January 2, 2026

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ರವಿಚಂದ್ರನ್ ಮಗನ ಮದುವೆ ಆಮಂತ್ರಣ ಪತ್ರಿಕೆ

ಕನಸುಗಾರ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ತಯಾರಿ ಶುರುವಾಗಿದೆ. ಕ್ರೇಜಿಸ್ಟಾರ್ ಹಿರಿಯ ಮಗ ಮನೋರಂಜನ್ ಮದುವೆ ತಯಾರಿ ಭರ್ಜರಿಯಾಗಿ ನಡೆಯುತ್ತಿದ್ದು ಇನ್ನೆನ್ನೂ ಕೆಲವೇ ಕೆಲವು ದಿನಗಳಲ್ಲಿ ಮಂಗಳವಾದ್ಯ ಮೊಳಗಲಿದೆ. ಸದ್ಯ ಮನೋರಂಜನ್ ಮದುವೆ ಆಮಂತ್ರಣ ಪತ್ರಿಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೃದಯದ ಆಕಾರದಲ್ಲಿ ಮದುವೆ ಪತ್ರಿಕೆ ಮಾಡಿಸಲಾಗಿದ್ದು ಅದರಲ್ಲಿ ರವಿಚಂದ್ರನ್ ಫೋಟೋ ಹೈಲೈಟ್ ಆಗಿದೆ. ಸಾಕಷ್ಟು ವಿಭಿನ್ನವಾಗಿರುವ ಮದುವೆ ಪತ್ರಿಕೆ ಪ್ರತಿಯೊಬ್ಬರು ಮನಸ್ಸು ಗೆಲ್ಲುತ್ತಿದೆ. ಮನೋರಂಜನ್ ಸಿನಿಮಾಗಳ ಮೂಲಕ ಚಂದನವನದಲ್ಲಿ ಸದ್ದು ಮಾಡ್ತಿದ್ದಾರೆ. 2017ರಲ್ಲಿ ಸಾಹೇಬ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ಮನೋರಂಜನ್ ಬಳಿಕ ಬೃಹಸ್ಪತಿ, ಮುಗಿಲ್ ಪೇಟೆ ಹಾಗೂ ಪ್ರಾರಂಭ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಮನೋರಂಜನ್ ಸಂಗೀತ ದೀಪಕ್ ಅವರ ಕೈ ಹಿಡಿಯಲು ರೆಡಿಯಾಗಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ವೈಟ್ ಪೆಟಲ್ಸ್‌ನಲ್ಲಿ ಆಗಸ್ಟ್ 20 ಮತ್ತು 21ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ. ಸ್ಯಾಂಡಲ್‌ವುಡ್ ಜತೆ ಪರಭಾಷಾ ಚಿತ್ರರಂಗದ ಸ್ಟಾರ್ಸ್‌ಗಳು ಮನೋರಂಜನ್ ಮದುವೆಗೆ ಹಾಜರಾಗಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now