• March 14, 2026

ಲಂಚ ಕೊಟ್ಟು ನಂಬರ್ ಒನ್ ಪಟ್ಟ ಗಿಟ್ಟಿಸಿಕೊಂಡ ಸಮಂತಾ

ದಕ್ಷಿಣ ಭಾರತದ ಖ್ಯಾತಿ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಡಿವೋರ್ಸ್ ಬಳಿಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಂತಾ ಕಳೆದ ಕೆಲ ದಿನಗಳಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ನಟಿ ಸಮಂತಾ ಡಿವೋರ್ಸ್ ಬಗ್ಗೆ ತುಟಿ ಬಿಚ್ಚಿದ್ದಾರೆ. ಇಷ್ಟು ದಿನಗಳಿಂದ ಸೈಲೆಂಟ್ ಆಗಿದ್ದ ಸಮಂತಾ ಕಾಫಿ ವಿತ್ ಕರಣ್ ಶೋನಲ್ಲಿ ಆಡಿದ್ದು ಮಾತುಗಳು ಸಾಕಷ್ಟು ಅಚ್ಚರಿಗೆ ಕಾರಣವಾಗಿದ್ದು, ಟೀಕೆಗೂ ಗುರಿಯಾಗಿದ್ದಾರೆ. ಈ ಮಧ್ಯೆ ಸಮಂತಾರ ಮತ್ತೊಂದು ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ತಾವು ನಂಬರ್ ವನ್ ನಟಿಯಾಗಲು ಖಾಸಗಿ ಕಂಪೆನಿಯೊಂದಕ್ಕೆ ಲಂಚ ಕೊಟ್ಟಿರುವ ವಿಷಯವನ್ನು ಬಾಯಿ ಬಿಟ್ಟಿದ್ದಾರೆ. ಈ ಮೂಲಕ ನಂಬರ್ ವನ್ ಸ್ಥಾನ ಗಿಟ್ಟಿಸಿಕೊಳ್ಳಲು ಬಣ್ಣದ ಲೋಕದಲ್ಲಿ ದುಡ್ಡು ಕೊಡಬೇಕಾ ಎಂಬ ಪ್ರಶ್ನೆ ಎದುರಾಗಿದೆ. ಸಮಂತಾ ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಜೊತೆಗೆ ಆಕೆಯ ಬಹಿರಂಗ ಹೇಳಿಕೆಗೆ ಮೆಚ್ಚುಗೆಯೂ ಪಾತ್ರವಾಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now