• March 15, 2026

ಬಿಗ್ ಬಾಸ್ ಸೀಸನ್ 9ರ ಪ್ರೋಮೋ ರಿಲೀಸ್: ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಶುರು ಕಿಚ್ಚನ ಹವಾ

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರುವ ಬಿಗ್ ಬಾಸ್ ಸೀಸನ್ 9ಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಬಿಗ್ ಬಾಸ್ ನಲ್ಲಿ ಈ ಬಾರಿ ಯಾರೆಲ್ಲಾ ಕಂಟೆಸ್ಟೆಂಟ್ ಗಳು ಭಾಗಿಯಾಗುತ್ತಾರೆ, ಸುದೀಪ್ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ? ಶೋ ಯಾವಾಗಿನಿಂದ ಶುರುವಾಗುತ್ತೆ ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಈ ಮಧ್ಯೆ ಬಿಗ್ ಬಾಸ್ ಸೀಸನ್ 9ರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಪ್ರೋಮೋ ಶೂಟ್ ಸಮಯದಲ್ಲಿ ಕಿಚ್ಚನ ಫೋಟೋ ಹಂಚಿಕೊಂಡು ಅಭಿಮಾನಿಗಳ ಕಾಯುವಿಕೆಯನ್ನು ಹೆಚ್ಚಿಸಿದ್ದರು. ಇದೀಗ ಪ್ರೋಮೋ ಕೂಡ ಬಿಡುಗಡೆ ಆಗಿದ್ದು ಶೋ ಯಾವಾಗಪ್ಪ ಶುರುವಾಗುತ್ತೆ ಅಂತಿದ್ದಾರೆ ಅಭಿಮಾನಿಗಳು. ಸದ್ಯ ಬಿಡುಗಡೆ ಆಗಿರುವ ಬಿಗ್ ಬಾಸ್ ಸೀಸನ್ 9ರ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಸುದೀಪ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರತಿ ಸೀಸನ್​ ಗಳಂತೆಯೇ ಈ ಸೀಸನ್​ ನಲ್ಲಿಯೂ ಕಣ್ಣಿನ ಮೇಲೆಯೇ ಫೋಸ್ಟರ್​ ರಚಿಸಲಾಗಿದೆ. ಬಿಗ್​ ಬಾಸ್​ ಕನ್ನಡ ಸೀಸನ್ 9ರ ಫಸ್ಟ್ ಲುಕ್ ಪೋಸ್ಟರ್​ ಮತ್ತು ಓಟಿಟಿ ಪ್ರೋಮೋವನ್ನು ಬಿಡುಗಡೆ ಮಾಡಿದ್ದು, ಒಟಿಟಿಯಲ್ಲಿ ಎಂದಿನಿಂದ ಪ್ರಸಾರವಾಗಲಿದೆ ಎಂಬುದನ್ನು ತಿಳಿಸದೆ. ಪ್ರಸಾರವಾಗಲಿದೆ ಎನ್ನುವುದರ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ ಬಿಗ್​ ಬಾಸ್​ 9ರ ಓಟಿಟಿ ಪ್ರೋಮೋವನ್ನು ಕೇವಲ ವೂಟ್​ ಸೆಲೆಕ್ಟ್​ ನಲ್ಲಿ ಮಾತ್ರ ಸದ್ಯ ಬಿಡುಗಡೆ ಮಾಡಿದೆ. ಬಿಗ್​ ಬಾಸ್​ ಓಟಿಟಿ ಇದೇ  ಆಗಸ್ಟ್ 6 ರಿಂದ ವೂಟ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಅಧಿಕೃತ ಪ್ರೋಮೋದಲ್ಲಿ ತಿಳಿಸಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now