• March 15, 2026

ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಬುಡಕಟ್ಟು ಮಹಿಳೆ

2020ರ 68ನೇ ಸಾಲಿನ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದರಲ್ಲಿ ‘ಅಯ್ಯಪ್ಪನುಂ ಕೊಶಿಯುಂ’ ಸಿನಿಮಾದ ಗಾಯಕಿ ನಾಂಚಿಯಮ್ಮ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಮೂಲಕ ಪ್ರಶಸ್ತಿ ಗೆದ್ದ ಮೊದಲ ಬುಡಕಟ್ಟು ಮಹಿಳೆ ಎಂದು ಖ್ಯಾತಿಗೆ ಗಾಯಕಿ ನಾಂಚಿಯಮ್ಮ ಪಾತ್ರರಾಗಿದ್ದಾರೆ. ಗಾಯಕಿ ನಾಂಚಿಯಮ್ಮ ಪ್ರಶಸ್ತಿಯನ್ನು ಅಯ್ಯಪ್ಪನುಂ ಕೊಶಿಯು ಸಿನಿಮಾ ನಿರ್ದೇಶಕ ಸಚಿಗೆ ಅರ್ಪಿಸಿತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಾಂಚಿಯಮ್ಮ, ನಾನು ಗುಡ್ಡದ ಮೇಲೆ ಆಡು ಹಾಗೂ ಹಸುಗಳನ್ನು ಮೇಯಿಸಿಕೊಂಡಿದ್ದೆ. ನನ್ನ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಸಚಿ ಸರ್ ನನಗೆ ಅವಕಾಶ ನೀಡಿ ಈ ಮಟ್ಟಕ್ಕೆ ತಂದಿದ್ದಾರೆ ಎಂದು ನಿರ್ದೇಶಕ ಕೆ ಆರ್​ ಸಚ್ಚಿದಾನಂದ್ ಅವರಿಗೆ ಧನ್ಯವಾದ ಅರ್ಪಿಸಿದರು. ಸಚಿ ಸರ್ ನನಗೆ ಜಗತ್ತನ್ನು ನೋಡಲು ಸಹಾಯ ಮಾಡಿದರು. ಆದರೆ, ನನಗೆ ಜಗತ್ತು ತೋರಿಸಿ ಸಚಿ ಸರ್ ಇಹಲೋಕ ತ್ಯಜಿಸಿದರು. ನಾನು ಸಚಿ ಸರ್​ಗೆ ಈ ಪ್ರಶಸ್ತಿಯನ್ನು ಸಂತೋಷದಿಂದ ಅರ್ಪಿಸುತ್ತೇನೆ, ಅದನ್ನು ಬಿಟ್ಟು ನನ್ನ ಕೈಯಲ್ಲಿ ಬೇರೆ ಏನೂ ಇಲ್ಲ ಎಂದು ಹೇಳಿದರು. ಅಯ್ಯಪ್ಪನುಂ ಕೊಶಿಯುಂ ಸಿನಿಮಾಗೆ ನಿರ್ದೇಶಕ ಸಚಿ ಕೂಡ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದುಕೊಂಡಿದ್ದಾರೆ. ಸಚಿ 2020ರ ಜೂನ್ 18ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜೊತೆಗೆ ಚಿತ್ರದ ನಟ ಬಿಜು ಮೆನನ್ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಶ್ರೇಷ್ಠಸಾಹನ ನಿರ್ದೇಶನ ಪ್ರಶಸ್ತಿಯನ್ನೂ ಅಯ್ಯಪ್ಪನುಂ ಕೊಶಿಯುಂ ಸಿನಿಮಾ ಪಡೆದುಕೊಂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now