ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕೆಜಿಎಫ್ 2 ಬಿಡುಗಡೆಯಾಗಿ 100 ದಿನ: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಹೊಂಬಾಳೆ ಫಿಲ್ಮ್ಸ್
ಕೆಜಿಎಫ್ ಸಿನಿಮಾದ ತುಣಕನ್ನು ಹಂಚಿಕೊಳ್ಳುವ ಮೂಲಕ ಸಿನಿಮಾದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಕೆಜಿಎಫ್ ಚಿತ್ರತಂಡ ಧನ್ಯವಾದ ತಿಳಿಸಿದೆ. ಕಳೆದ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾ ತೆರೆಗೆ ಬಂದಿತ್ತು. ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಯಲ್ಲಿ ತೆರೆಕಂಡು ಎಲ್ಲಾ ಭಾಷೆಯಲ್ಲೂ ಸೂಪರ್ ಹಿಟ್ ಆಗಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ನಟನೆಯ ಸಿನಿಮಾ ಭರ್ಜರಿ ಓಪನಿಂಗ್ಸ್ ಪಡೆದುಕೊಂಡಿತ್ತು.
ಕೆಜಿಎಫ್ 2 ಸಿನಿಮಾ 1250 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು ಹಿಂದಿಯಲ್ಲಿಯೇ 434 ಕೋಟಿ ಲಭಿಸಿತ್ತು. ವಿಜಯ್ ಕಿರಗಂದೂರು ನಿರ್ಮಾಣದ ಕೆಜಿಎಫ್ ಸಿನಿಮಾದ ಬಳಿಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದ್ದು ಪರಭಾಷೆಯಿಂದ ಸಾಕಷ್ಟು ಆಫರ್ ಗಳು ಬರ್ತಿವೆ.
Thank You for scripting and stitching this amazing journey for us. We can still feel the jubilation & reverberation all around us. We promise to keep you enthralled with our next #Monster hit and of our home run!#KGF2 #100MonsterDaysOfKGF2#HombaleFilms pic.twitter.com/WDfHTG7fR6
— Hombale Films (@hombalefilms) July 22, 2022
