ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವದಂತಿಗಳಿಗೆ ಬ್ರೇಕ್ ಹಾಕಿದ ನೆಟ್ ಫ್ಲಿಕ್ಸ್: ನಯನತಾರಾ, ವಿಘ್ನೇಶ್ ಮದುವೆ ಪ್ರಸಾರವಾಗೋದು ಖಚಿತ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯಾಗಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳು ಕಳೆದ ಹಿನ್ನೆಲೆಯಲ್ಲಿ ಈ ಜೋಡಿಗಳು ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋ ನೋಡಿ ನೆಟ್ ಫ್ಲಿಕ್ಸ್ ಸಂಸ್ಥೆ ಗರಂ ಆಗಿದ್ದು ಒಪ್ಪಂದ ಮುರಿದಿದ್ದಕ್ಕೆ ಡೀಲ್ ಕ್ಯಾನ್ಸಲ್ ಮಾಡಿಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಅದೆಲ್ಲದಕ್ಕೂ ನೆಟ್ ಫ್ಲಿಕ್ಸ್ ಸಂಸ್ಥೆ ಸ್ಪಷ್ಟನೆ ನೀಡಿದೆ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯ ಸುಂದರ ಕ್ಷಣಗಳನ್ನು ಸದ್ಯದಲ್ಲೇ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರ ಮಾಡುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಈ ವಿಷಯ ಕೇಳಿ ಲೇಡಿ ಸೂಪರ್ ಸ್ಟಾರ್ ಫ್ಯಾನ್ಸ್ ಗಳು ಖುಷಿಯಾಗಿದ್ದಾರೆ. ಅಲ್ಲದೆ ಈ ಜೋಡಿಯ ಮುದ್ದಾದ ಲವ್ ಸ್ಟೋರಿಯನ್ನು ಸಾಕ್ಷ್ಯಚಿತ್ರದ ಮೂಲಕ ಹೇಳೋಕೆ ನೆಟ್ ಫ್ಲಿಕ್ಸ್ ಮುಂದಾಗಿದೆ.
ನಯನತಾರಾ ಹಾಗೂ ವಿಘ್ನೇಶ್ ಮದುವೆಗೆ ಸೂಪರ್ ಸ್ಟಾರ್ ರಜನಿಕಾಂತ್, ಶಾರುಖ್ ಖಾನ್, ಸೂರ್ಯ ದಂಪತಿಗಳು ಸೇರಿದಂತೆ ಸಾಕಷ್ಟು ಸ್ಟಾರ್ ನಟ, ನಟಿಯರು ಕುಟುಂಬ ಸಮೇತ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದರು.
These images of Nayanthara and Vignesh have us seeing stars 🤩✨
— Netflix India (@NetflixIndia) July 21, 2022
BRB, we're doing a little happy dance ourselves because THEY’RE coming to Netflix🕺💃it’s beyond a fairy tale!! pic.twitter.com/14poQwNAZv
