ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಾಧ್ಯಮ ಪ್ರತಿನಿಧಿಗಳ ಕ್ಷಮೆ ಯಾಚಿಸಿದ ಕಿಚ್ಚ ಸುದೀಪ್
ಈ ಬಗ್ಗೆ ಟ್ವೀಟ್ ಮೂಲಕ ಸುದೀಪ್ ಕ್ಷಮೆಯಾಚಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿದ್ದಕ್ಕೆ ಕೊಚ್ಚಿ, ಚೆನ್ನೈ ಮತ್ತು ಹೈದರಾಬಾದ್ ಮಾಧ್ಯಮದ ಗೆಳೆಯರಿಗೆ ಕ್ಷಮೆ ಕೇಳುತ್ತೇನೆ. ಹುಷಾರಿಲ್ಲದ ಕಾರಣದಿಂದಾಗಿ ನನಗೆ ಪ್ರಯಾಣ ಮಾಡುವುದು ಕಷ್ಟಸಾಧ್ಯ. ಹಾಗಾಗಿ ಬರಲಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ದಿನಾಂಕ ನಿಗದಿಪಡಿಸಿ, ನಿಮ್ಮೊಂದಿಗೆ ಮಾತನಾಡಲು ಉತ್ಸುಕನಾಗಿದ್ದೇನೆ. ಆದಷ್ಟು ಬೇಗ ಸಿಗೋಣ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ದಿನಗಳಿಂದ ಸುದೀಪ್ ಗೆ ಜ್ವರದಿಂದ ಬಳಲಿತ್ತಿದ್ದಾರೆ.ಹೀಗಾಗಿ ಅಭಿಮಾನಿಗಳು ಸುದೀಪ್ ಅವರಿಗೆ ಎರಡನೇ ಭಾರಿ ಕೋವಿಡ್ ಪಾಸಿಟಿವ್ ಆಗಿದೆ ಎಂದುಕೊಂಡಿದ್ದರು. ಬಳಿಕ ನಿರ್ಮಾಪಕ ಜಾಕ್ ಮಂಜ ಸ್ಪಷ್ಟನೆ ನೀಡಿದ್ದು ಸುದೀಪ್ ಅವರಿಗೆ ಜ್ವರ ಕಾಣಿಸಿಕೊಂಡಿದೆ ಅಷ್ಟೇ. ಕೋವಿಡ್ ಅಲ್ಲ ಎಂದು ಕ್ಲಾರಿಟಿ ನೀಡಿದ್ದರು.
