• March 14, 2026

ಅನುಷ್ಕಾ ಶೆಟ್ಟಿ ಸಿನಿ ಜರ್ನಿಗೆ 17 ವರ್ಷ: ಕೇಕ್ ಕತ್ತರಿಸಿ ಸಂಭ್ರಮಿಸಿದ ನಟಿ

ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟು 17 ವರ್ಷ ಕಳೆದಿದೆ. ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ಅನುಷ್ಕಾ ಶೆಟ್ಟಿ ವಿಭಿನ್ನ ಪಾತ್ರಗಳ ಮೂಲಕವೇ ಪ್ರೇಕ್ಷಕರ ಮನ ಗೆದ್ದ ನಟಿ. 17 ವರ್ಷಗಳ ಸಿನಿ ಪಯಣದ ಸಂಭ್ರಮವನ್ನು ಕೇಕ್ ಕಟ್ ಮಾಡುವ ರುದ್ರಮ್ಮದೇವಿ ಸಂಭ್ರಮಿಸಿದ್ದಾರೆ. ತೆಲುಗಿನ ಸೂಪರ್ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಅನುಷ್ಕಾ ಶೆಟ್ಟಿ ಹಲವು ಬಗೆಯ ಪಾತ್ರಗಳ ಮೂಲಕವೇ ಅಭಿಮಾನಿಗಳ ಮನಸೂರೆಗೊಂಡ ನಾಯಕಿ. ತೆಲುಗಿನ ಜೊತೆ ತಮಿಳು ಚಿತ್ರರಂಗದಲ್ಲೂ ಮಿಂಚಿದ ನಟಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. 17 ವರ್ಷಗಳ ಸಿನಿಮಾ ಜರ್ನಿಯನ್ನು ತಮ್ಮ ಹೊಸ ಚಿತ್ರತಂಡದ ಸದಸ್ಯರ ಜೊತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. 17 ವರ್ಷಗಳ ಸಿನಿ ಜರ್ನಿಯಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಬಾಹುಬಲಿ ಸಿನಿಮಾದ ದೇವಸೇನಾ ಪಾತ್ರದಲ್ಲಿ ವಿಶ್ವದಾದ್ಯಂತ ಗುರುತಿಸಿಕೊಂಡು ಅನುಷ್ಕಾ ಶೆಟ್ಟಿ ನವೀನ್ ಪೋಲಿ ಶೆಟ್ಟಿ ನಟನೆಯ ಹೊಸ ಸಿನಿಮಾದ ನಾಯಕಿಯಾಗಿ ಹೊಸ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅನುಷ್ಕಾ ಸಿನಿ ಜರ್ನಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now