ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಗನ ಜೊತೆ ರೀಲ್ಸ್ ಗೆ ಹೆಜ್ಜೆ ಹಾಕಿದ ಸಂಜನಾ ಗಲ್ರಾನಿ
ನಟಿ ಸಂಜನಾ ಗಲ್ರಾಣಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಮಗನ ಅದ್ದೂರಿ ನಾಮಕರಣ ಮಾಡಿರುವ ಸಂಜನಾ ಆಗಾಗ ರೀಲ್ಸ್ ಗಳನ್ನ ಮಾಡಿ ಸಾಮಾಜಿಕ ಜಾಲಾ ತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಇದೇ ಮೊದಲ ಬಾರಿಗೆ ಮುದ್ದು ಮಗ ಅಲಾರಿಕ್ ಜೊತೆ ರೀಲ್ಸ್ ಮಾಡಿದ್ದು ಈ ರೀಲ್ಸ್ ಸಖತ್ ವೈರಲ್ ಆಗಿದೆ.
ಹಿಂದಿ ಹಾಡಿಗೆ ಮಗನನ್ನು ಹಿಂಡಿದು ಸಂಜನಾ ಸಖತ್ತಾಗೆ ಸ್ಟೆಪ್ ಹಾಕಿದ್ದಾರೆ. ಮಗುವಿನ ಆಗಮನದ ಬಳಿಕ ಮಗನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರೋ ಸಂಜನಾ ಆದಷ್ಟು ಬೇಗ ಮತ್ತೆ ಬೆಳ್ಳಿ ಪರದೆಗೆ ಬರಲಿ ಅಂತಿದ್ದಾರೆ ಅವರ ಅಭಿಮಾನಿಗಳು.
