ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುದೀಪ್ ಕಡೆಯಿಂದ ಸಿಕ್ಕಿತು ಸಿಹಿ ಸುದ್ದಿ: ಡಿಸೆಂಬರ್ ನಿಂದ ಹೊಸ ಸಿನಿಮಾದ ಶೂಟಿಂಗ್
ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ನಟನೆಯ ಮುಂದಿನ ಸಿನಿಮಾ ಯಾವುದೂ ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಕಿಚ್ಚನ ಬಹು ನಿರೀಕ್ಷಿತ ವಿಕ್ರಾಂತ್ ರೋಣ ರಿಲೀಸ್ ಆದ ಬಳಿಕ ಬಿಲ್ಲ ರಂಗ ಬಾಷಾ ಸಿನಿಮಾದಲ್ಲಿ ಸುದೀಪ್ ಬಣ್ಣ ಹಚ್ಚಲಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ವಿಕ್ರಾಂತ್ ರೋಣ ಸಿನಿಮಾಗೂ ಮುನ್ನವೇ ಬಿಲ್ಲ ರಂಗ ಬಾಷಾ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಸುದೀಪ್ ಅದಕ್ಕೂ ಮೊದಲು ವಿಕ್ರಾಂತ್ ರೋಣ ಕೈಗೆತ್ತಿಕೊಂಡರು.
ಇದೀಗ ಬಿಲ್ಲ ರಂಗ ಸಿನಿಮಾದಲ್ಲಿ ಸುದೀಪ್ ಕಾಣಿಸಿಕೊಳ್ಳೋಕೆ ರೆಡಿಯಾಗಿದ್ದಾರೆ. ಡಿಸೆಂಬರ್ ನಿಂದ ಬಿಲ್ಲರಂಗ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು ಈಗಾಗ್ಲೆ ಸ್ಕ್ರೀಪ್ಟ್ ವರ್ಕ್ ಕೆಲಸ ಬಹುತೇಕ ಕಂಪ್ಲೀಟ್ ಆಗಿದೆ. ಅಂದ ಹಾಗೆ ಬಿಲ್ಲ ರಂಗ ಬಾಷಾ ಸಿನಿಮಾವನ್ನು ನಿರ್ದೇಶನ ಮಾಡ್ತಿರೋದು ವಿಕ್ರಾಂತ್ ರೋಣ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವ ಅನೂಪ್ ಭಂಡಾರಿ.
