• June 13, 2026

ಮತ್ತೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ: ಕಿರಿಕ್ ಹುಡುಗಿಯ ಅದೃಷ್ಟ ನೋಡಿ ಖುಷಿಯಾಗಿ ಅಭಿಮಾನಿಗಳು

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಎಂಟ್ರಿಕೊಟ್ಟ ರಶ್ಮಿಕಾ ತೆಲುಗು ಸಿನಿಮಾದಲ್ಲಿ ನಟಿಸಿ ಬಳಿಕ ಬಿಟೌನ್ ಗೂ ಲಗ್ಗೆ ಇಟ್ಟಿದ್ದಾರೆ. ಇದೀಗ ಮತ್ತೊಬ್ಬ ಸ್ಟಾರ್ ನಟನ ಜೊತೆ ಸ್ಕ್ರೀನ್ ಶೇರ್ ಮಾಡೋಕೆ ರಶ್ಮಿಕಾ ರೆಡಿಯಾಗಿದ್ದಾರೆ. ಈಗಾಗ್ಲೆ ಸ್ಟಾರ್ ನಟರುಗಳಾದ ವಿಜಯ್ ದೇವರಕೊಂಡ, ದಳಪತಿ ವಿಜಯ್, ಮಹೇಶ್ ಬಾಬು, ರಣಬೀರ್ ಕಪೂರ್, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ನಟಿಸಿದ್ದ ರಶ್ಮಿಕಾ ಇದೀಗ ಚಿಯಾನ್ ವಿಕ್ರಮ್ ಗೆ ಜೋಡಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಚಿಯಾನ್ ವಿಕ್ರಮ್ ನಟನೆಯ 61ನೇ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈಗಾಗಲೇ ರಶ್ಮಿಕಾ ನಿರ್ಮಾಪಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಸದ್ಯ ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳು ಇರೋದ್ರಿಂದ ಡೇಟ್ ಹೊಂದಾಣಿಕೆ ಮಾಡಿಕೊಂಡು ವಿಕ್ರಾಮ್ ಸಿನಿಮಾದಲ್ಲಿ ನಟಿಸಬೇಕಿದೆ. ಡೇಟ್ಸ್ ಹೊಂದಾಣಿಕೆ ಆದ ಬಳಿಕ ಚಿತ್ರತಂಡದಿಂದ ಅಧಿಕೃತ ಅನೌನ್ಸ್ ಮೆಂಟ್ ಆಗಲಿದೆ ಎಂಬ ಮಾತು ಕೇಳಿ ಬರ್ತಿದೆ. ಚಿಯಾನ್ ವಿಕ್ರಮ್ ನಟನೆಯ 61ನೇ ಸಿನಿಮಾಗೆ ಪಾ.ರಂಜಿತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಕಬಾಲಿ, ಕಾಲಾ ಸಿನಿಮಾಗೆ ಪಾ.ರಂಜಿತ್ ಆಕ್ಷನ್ ಕಟ್ ಹೇಳಿದ್ದರು.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now