ಬಹುಭಾಷಾ ನಟ, ನಿರ್ದೇಶಕ, ಬರಹಗಾರ ಪ್ರತಾಪ್ ಪೋತೆನ್ ಅವರ ದೇಹ ಚೆನ್ನೈನ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.
69 ವರ್ಷ ವಯಸ್ಸಿನ ಪ್ರತಾಪ್ ಚೆನ್ನೈನ ಕಿಲ್ ಪೌಕ್ ನ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದು ಇಂದು ಬೆಳಗ್ಗೆ ಅವರ ದೇಹ ಶವವಾಗಿ ಪತ್ತೆಯಾಗಿದೆ.
ಮಲಯಾಳಂ ಸಿನಿಮಾ ರಂಗದ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಪ್ರತಾಪ್ ಪೋತೆನ್ ಬಳಿಕ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದರು.
ಕಿಲ್ ಪೌಕ್ ಅಪಾರ್ಟ್ ಮೆಂಟ್ ನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದ ಪ್ರತಾಪ್ ಅವರಿಗೆ ಕಳೆದ ಕೆಲ ದಿನಗಳಿಂದ ಆರೋಗ್ಯದ ಸಮಸ್ಯೆಯೂ ಕಾಣಿಸಿಕೊಂಡಿದ್ದು ಅವರ ಸಾವಿಗೆ ಅನಾರೋಗ್ಯವೇ ಕಾರಣವಿರ ಬಹುದು ಎನ್ನಲಾಗಿದೆ.
1985 ರಲ್ಲಿ ನಟಿ ರಾಧಿಕಾರನ್ನು ವಿವಾಹವಾದ ಪ್ರತಾಪ್ ಇಬ್ಬರ ನಡುವೆ ಹೊಂದಾಣಿಕೆ ಸರಿ ಬರದ ಕಾರಣಕ್ಕೆ ಒಂದೇ ವರ್ಷದಲ್ಲಿ ದೂರವಾಗಿದ್ದರು.
1990ರಲ್ಲಿ ಉದ್ಯಮಿ ಅಮಲ್ಯ ಸತ್ಯನಾಥನ್ ಅವರನ್ನು ವಿವಾಹವಾಗಿದ್ದ ಪ್ರತಾಪ್ 22 ವರ್ಷಗಳ ಕಾಲ ಜೊತೆಯಾಗಿ ಸಂಸಾರ ನಡೆಸಿದ್ದರು. ಬಳಿಕ ಅವರಿಂದಲೂ ವಿಚ್ಚೇಧನ ಪಡೆದಿದ್ದ ನಟ ಒಂಟಿಯಾಗಿ ಜೀವನ ನಡೆಸುತ್ತಿದ್ದರು.
ಪ್ರತಾಪ್ ನಿಧನಕ್ಕೆ ತಮಿಳು ಹಾಗೂ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.