• February 10, 2026

ವಂಚನೆ ಪ್ರಕರಣ: ಸ್ಯಾಂಡಲ್ ವುಡ್ ನಟ ಕಂ ನಿರ್ಮಾಪಕನ ಬಂಧನ

ಸ್ವಯಂ ಕೃಷಿ ಸಿನಿಮಾದ ನಟ ಹಾಗೂ ನಿರ್ಮಾಪಕ ವೀರೇಂದ್ರ ಬಾಬು ಅವರನ್ನು ಬೆಂಗಳೂರಿನ ಕೊಡಿಗೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಮುಂಬರುವ ಎಂಎಲ್ ಎ ಹಾಗೂ ಎಂಪಿ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಸವರಾಜ್ ಘೋಷಾಲ್ ಎಂಬುವವರಿಂದ 1.88 ಕೋಟಿ ರೂ ಪಡೆದು ವಂಚಿಸಿದ್ದು ಈ ಪ್ರಕರಣದಲ್ಲಿ ವೀರೇಂದ್ರ ಬಾಬು ಅವರನ್ನು ಬಂಧಿಸಲಾಗಿದೆ. ಇದರ ಜೊತೆಗೆ ರಾಷ್ಟ್ರ ಜನಹಿತ ಪಕ್ಷದ ಜೊತೆ ಕರ್ನಾಟಕ ರಕ್ಷಣಾ ಪಡೆಯನ್ನು ಕಟ್ಟಿಕೊಂಡಿದ್ದ ವೀರೇಂದ್ರ ಬಾಬು ಇಲ್ಲೂ ಸಾಕಷ್ಟು ವಂಚನೆ ನಡೆಸಿರೋದು ಬೆಳಕಿಗೆ ಬಂದಿದೆ. ಈ ಸಂಘಟನೆಗಳಿಗೆ ತಾಲೂಕು ಹಾಗೂ ಜಿಲ್ಲಾ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿ ಹಲವರಿಂದ ಹಣ ಪಡೆದು ವಂಚಿಸಿರುವ ವಿಚಾರವು ಇದೀಗ ಬೆಳಕಿಗೆ ಬಂದಿದೆ. ಕೆಲ ವರ್ಷಗಳ ಹಿಂದೆ ಸ್ವಯಂ ಕೃಷಿ ಹೆಸರಿನಲ್ಲಿ ಸಾಕಷ್ಟು ಸಂಸ್ಥೆಗಳನ್ನು ಹುಟ್ಟುಹಾಕಿದ್ದ ವೀರೇಂದ್ರ ಬಾಬು ಅಲ್ಲೂ ಅನೇಕರಿಗೆ ವಂಚಿಸಿದ್ದರು. ಈ ಹಿನ್ನೆಲೆಯಲ್ಲಿ ಹೈದರಾಬಾದ್ ನಲ್ಲಿ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದರು. ಇದೀಗ ಮತ್ತೆ ಮೋಸ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

karnatakaspecial.in

https://karnatakaspecial.in/

Related post

Leave a Reply

Your email address will not be published. Required fields are marked *

Phone icon
Call Now
Reach us!
WhatsApp icon
Chat Now