• March 19, 2026

ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಸಂಭ್ರಮ

ಶುಕ್ರವಾರ ಬಂತು ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಸುಗ್ಗಿ. ಕೋವಿಡ್ ನಿಂದ ಕೊಂಚ ಮಂಕಾಗಿದ್ದ ಗಾಂಧಿನಗರದ ಇದೀಗ ಕಳೆ ತುಂಬಿಕೊಂಡಿದೆ. ಹೀಗಾಗಿ ಸಾಕಷ್ಟು ಸಿನಿಮಾ ತಂಡದವ್ರು ಜಿದ್ದಿಗೆ ಬಿದ್ದವರಂತೆ ಸಿನಿಮಾಗಳನ್ನ ತೆರೆ ಮೇಲೆ ತರ್ತಿದ್ದಾರೆ. ನಾಳೆ ಒಟ್ಟು ಎಂಟು ಸಿನಿಮಾಗಳು ಕನ್ನಡದಲ್ಲಿ ತೆರೆಗೆ ಬರ್ತಿವೆ. ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ನಟನೆಯ ಪೆಟ್ರೋ ಮ್ಯಾಕ್ಸ್ ಸಿನಿಮಾ ಈ ವಾರ ತೆರೆಗೆ ಬರ್ತಿದೆ. ನೀರ್ ದೋಸೆ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದು ನಿರ್ದೇಶಕ ವಿಜಯ್ ಪ್ರಸಾದ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗ್ಲೆ ಟ್ರೈಲರ್ ಮೂಲಕ ಗಮನ ಸೆಳೆದಿರುವ ಪೆಟ್ರೋಮ್ಯಾಕ್ಸ್ ಈ ವಾರದ ನಿರೀಕ್ಷಿತ ಸಿನಿಮಾಗಳಲ್ಲೊಂದು. ಈ ವಾರದ ಮತ್ತೊಂದು ಭರವಸೆಯ ಸಿನಿಮಾ ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದಿರುವ ಓ ಮೈ ಲವ್ ಚಿತ್ರ. ಈ ಚಿತ್ರದ ಮೂಲಕ ಹಿರಿಯ ನಟ ಶಶಿಕುಮಾರ್ ಪುತ್ರ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿಕೊಡ್ತಿದ್ದಾರೆ. ಜೊತೆಗೆ ರಾಧಿಕಾ ನಾರಾಯಣ್ ಹಾಗೂ ಅವಿನಾಶ್ ನರಸಿಂಹರಾಜು ನಟನೆಯ ಚೇಸ್ ಸಿನಿಮಾ ಕೂಡ ಈ ವಾರ ತೆರೆಗೆ ಬರ್ತಿದೆ. ಮಿಥುನ್ ಚಂದ್ರಶೇಖರ್ ನಿರ್ದೇಶನ, ವಿಕ್ರಮ್ ಆರ್ಯ ನಟನೆಯ ಪದ್ಮಾವತಿ ಸಿನಿಮಾ ಕೂಡಾ ಸಾಕಷ್ಟು ಭರವಸೆ ಮೂಡಿಸಿದೆ. ಇದರ ಜೊತೆಗೆ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಡ್ಕಿ ಸಿನಿಮಾ ಕನ್ನಡದಲ್ಲಿ ಹುಡುಗಿ ಟೈಟಲ್ ನಲ್ಲಿ ತೆರೆಗೆ ಬರ್ತಿದೆ. ಇದರ ಜೊತೆಗೆ ಸಾಯಿ ಪಲ್ಲವಿ ನಟನೆಯ ಗಾರ್ಗಿ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆ ಆಗ್ತಿದೆ. ಒಟ್ನಲ್ಲಿ ಈ ವಾರ ಎಂಟು ಸಿನಿಮಾಗಳು ತೆರೆಗೆ ಬರ್ತಿರೋದ್ರಿಂದ ಅಭಿಮಾನಿಗಳು ಸಹಜವಾಗಿಯೇ ಯಾವ ಸಿನಿಮಾ ನೋಡೋದು ಎಂಬ ಗೊಂದಲದಲ್ಲಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now