ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರೋ ಬಿಗ್ ಬಾಸ್ ಸೀಸನ್ 9 ಇನ್ನೆನ್ನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸದ್ಯ ಸುದೀಪ್ ಪ್ರೋಮೋ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಅವರ ಗೆಟಪ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ ಹೆಸರು ನಟಿ ಪವಿತ್ರ ಲೋಕೇಶ್. ತೆಲುಗು ನಟ ನರೇಶ್ ಜೊತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಪವಿತ್ರಾ ಲೋಕೇಶ್ ಬಿಗ್ ಬಾಸ್ ಮನೆಯೊಳಗೆ ಎಂಟ್ರಿಕೊಡ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಇವರ ಜೊತೆಗೆ ನಂಬರ್ ಗುರೂಜಿ ಎಂದೇ ಖ್ಯಾತಿ ಘಳಿಸಿರುವ ಆರ್ಯವರ್ಧನ್, ಹಾಸ್ಯನಟ ಟೆನ್ನಿಸ್ ಕೃಷ್ಣ, ನಿರ್ದೇಶಕ ಹಾಗೂ ನಟ ನವೀನ್ ಕೃಷ್ಣ, ನಾಗಿಣಿ 2 ಧಾರವಾಹಿಯ ನಟಿ ನಮೃತಾ ಗೌಡ, ಸರಿಗಮಪ ಖ್ಯಾತಿಯ ಹನುಮಂತ ಲಮಾಣಿ, ಗಾಯಕ ರಘು ದೀಕ್ಷಿತ್, ಪತ್ರಕರ್ತ ಇಂದ್ರಜಿತ್ ಲಂಕೇಶ್ ಹಾಗೂ ನ್ಯೂಸ್ ರೀಡರ್ ದಿವ್ಯಾ ವಸಂತ ಬಿಗ್ ಬಾಸ್ ಮನೆಗೆ ಎಂಟ್ರಿಕೊಡ್ತಿದ್ದಾರೆ ಎನ್ನಲಾಗ್ತಿದೆ.
ಇನ್ನೂ ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಪ್ರೋಮೋ ಶೂಟ್ ನ ಫೋಟೋವನ್ನ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಸುದೀಪ್ ಮತ್ತಷ್ಟು ಯಂಗ್ ಎಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಂಡಿದ್ದ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಸದ್ಯದಲ್ಲೇ ಬಿಗ್ ಬಾಸ್ ಸೀಸನ್ 9 ಆರಂಭವಾಗಲಿದ್ದು ಸುದೀಪ್ ನಿರೂಪಣೆ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ.