ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಾಷ್ಟ್ರ ಲಾಂಛನದಲ್ಲಿ ಘರ್ಜಿಸುತ್ತಿರುವ ಆ ಸಿಂಹವೇ ಮೋದಿ: ಟೀಕಾಕಾರರಿಗೆ ಜಗ್ಗೇಶ್ ತಿರುಗೇಟು
ರಾಷ್ಟ್ರದ ಜನ ಎದೆಯುಬ್ಬಿಸಿ ಹೇಳುವಂತಹ ಉತ್ತಮ ಧೀಮಂತ ನಾಯಕ ಸಿಕ್ಕಿದ್ದಾನೆ. ಘರ್ಜಿಸುತ್ತಿರುವ ಆ ಸಿಂಹವೇ ಮೋದಿ. ಅಶೋಕ ಲಾಂಛನದ ಮೂಲ ಬೇಕಾದವರು ಮ್ಯೂಸಿಯಂನಲ್ಲಿ ನೋಡಲಿ. ಮ್ಯೂಸಿಯಂನಲ್ಲಿ ಇರುವ ಹಾಗೆ ಯಥಾವತ್ ಲಾಂಛನವನ್ನು ಸೆಂಟ್ರಲ್ ವಿಸ್ತಾದಲ್ಲಿ ಮಾಡಲಾಗಿದೆ. ಮೋದಿ ಅವರನ್ನು ಆರಾಧಿಸುವವರ ಸಂಖ್ಯೆ 98% ಇದ್ದರೆ, ರೋಧಿಸುವವರ ಸಂಖ್ಯೆ 2% ಇದೆ. ಅದಕ್ಕೆ ಏನೂ ಮಾಡೋಕೆ ಆಗಲ್ಲ ಎಂದರು.
ಆಕರ್ಷಕ ಮತ್ತು ವಿಶ್ವಾಸದ ಮುಖದಿಂದ ಕೂಡಿರುವ ಅಶೋಕನ ಸಿಂಹದ ಬದಲಿಗೆ ಭಯಾನಕ ಹಾಗೂ ಉಗ್ರವತಾರದ ಸಿಂಹದ ಭಂಗಿ ಹೊಂದಿರುವ ಲಾಂಛನವನ್ನು ಬದಲಾಯಿಸುವ ಮೂಲಕ ದೇಶದ ರಾಷ್ಟ್ರ ಲಾಂಛನವನ್ನು ವಿರೂಪಗೊಳಿಸಲಾಗಿದೆ ಎಂದು ಕಾಂಗ್ರೆಸ್ ಹಾಗೂ ಸಾಮಾಜಿಕ ಹೋರಾಟಗಾರರು ಆಕ್ಷೇಪಿಸಿದ್ದಾರೆ. ಹೊಸ ಪಾರ್ಲಿಮೆಂಟ್ ಕಟ್ಟಡದ ಮೇಲಿನ ರಾಷ್ಟ್ರ ಲಾಂಛವನ್ನು ಪರಿಶೀಲನೆ ಮಾಡಿ ಇಲ್ಲವೆ ದುರಸ್ತಿ ಮಾಡಿ ಎಂಬ ಮಾತುಗಳು ಕೇಳಿ ಬರ್ತಿದೆ.
