• June 19, 2026

‘ಶುಗರ್ ಲೆಸ್’ ಗೆ ಶುಭ ಹಾರೈಸಿದ ವಿಜಯ್ ಸೇತುಪತಿ

ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ರೆಡಿಯಾಗ್ತಿರೋ ಸಾಕಷ್ಟು ಸಿನಿಮಾಗಳು ಪರಭಾಷೆಯ ಮಂದಿಯ ಗಮನ ಸೆಳೆಯುವಲ್ಲಿ ಸಕ್ಸಸ್ ಆಗ್ತಿವೆ. ದೊಡ್ಡ ಬಜೆಟ್ ನ ಸಿನಿಮಾಗಳು ಮಾತ್ರವಲ್ಲ ಹೊಸಬರ ಸಣ್ಣ ಸಣ್ಣ ಸಿನಿಮಾಗಳು ಕೂಡ ಪರಭಾಷೆಗೆ ರಿಮೇಕ್ ಆಗ್ತಿದ್ದು ಸ್ಟಾರ್ ನಟ, ನಟಿಯರು ಬಣ್ಣ ಹಚ್ಚುತ್ತಿದ್ದಾರೆ. ಇದೀಗ ರಿಲೀಸ್ ಆಗಿ ಜನರ ಮೆಚ್ಚುಗೆ ಗಳಿಸಿರುವ ಶುಗರ್ ಲೆಸ್ ಸಿನಿಮಾ ಕೂಡ ಪರಭಾಷೆ ಕಲಾವಿದರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ ಶುಗರ್ ಲೆಸ್ ಸಿನಿಮಾಗೆ ಅಭಿನಂದನೆ ತಿಳಿಸಿದ್ದಾರೆ. ಶಗರ್ ಲೆಸ್ ಸಿನಿಮಾದ ಗ್ರ್ಯಾಂಡ್ ಸಕ್ಸಸ್ ಗೆ ಅಭಿನಂದನೆಗಳು ಬಂದು ಎಂದು ವಿಜಯ್ ಟ್ವೀಟರ್ ಖಾತೆಯಲ್ಲಿ ಬರೆದಕೊಂಡಿದ್ದು, ಚಿತ್ರದ ಪೋಸ್ಟರ್ ಕೂಡ ಹಂಚಿಕೊಂಡಿದ್ದಾರೆ. ಶಶಿಧರ್ ಕೆ.ಎಂ. ನಿರ್ದೇಶಿಸಿ, ನಿರ್ಮಾಣ ಮಾಡಿರೋ ಶುಗರ್ ಲೆಸ್ ಸಿನಿಮಾದಲ್ಲಿ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಹಾಗೂ ಪ್ರಿಯಾಂಕ ತಿಮ್ಮೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜುಲೈ 8ರಂದು ರಿಲೀಸ್ ಆದ ಶುಗರ್ ಲೆಸ್ ಸಿನಿಮಾ ಅಭಿಮಾನಿಗಳ ಮನ ಮುಟ್ಟುವಲ್ಲಿ ಸಕ್ಸಸ್ ಆಗಿದ್ದು ಇದೀಗ ಪರಭಾಷೆಯ ಮಂದಿಯೂ ಈ ಚಿತ್ರಕ್ಕೆ ಮನ ಸೋತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now