ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಟೈಗರ್ ಶ್ರಾಫ್ ಜೊತೆ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದ ರಶ್ಮಿಕಾ: ನಟಿಯ ಹೇಳಿಕೆಯಿಂದ ನಿರಾಸೆಗೊಂಡ ಅಭಿಮಾನಿಗಳು
ರಶ್ಮಿಕಾ, ಟೈಗರ್ ಶ್ರಾಫ್ ಜೊತೆ ನಟಿಸ್ತಿರೋದು ನಿಜ. ಆದರೆ ಸಿನಿಮಾದಲ್ಲಿ ಅಲ್ಲ. ಬದಲಾಗಿ ರಶ್ಮಿಕಾ ಹಗೂ ಟೈಗರ್ ಶ್ರಾಫ್ ಒಟ್ಟಿಗೆ ಜಾಹೀರಾತೊಂದರಲ್ಲಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ಈ ಜೋಡಿಯನ್ನ ತೆರೆ ಮೇಲೆ ನೋಡ್ಬೇಕು ಅಂದುಕೊಂಡಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಶ್ಮಿಕಾ, ನಿಮ್ಮ ರೂಮರ್ಸ್, ಗಾಸಿಪ್ ಎಲ್ಲವೂ ನಿಜ. ಆದರೆ, ಟೈಗರ್ ಶ್ರಾಫ್ ಜೊತೆ ಸಿನಿಮಾದಲ್ಲಿ ಅಲ್ಲ, ಜಾಹೀರಾತಿನಲ್ಲಿ ನಟಿಸುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗಾಗ್ಲೆ ಬಾಲಿವುಡ್ ಸಿನಿಮಾದಲ್ಲಿ ನಟಿಸಿರೋ ರಶ್ಮಿಕಾ ಅಲ್ಲೂ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ. ಹೀಗಾಗಿ ರಶ್ಮಿಕಾ ಹಾಗೂ ಟೈಗರ್ ಶ್ರಾಫ್ ಆದಷ್ಟು ಬೇಗ ಸಿನಿಮಾದ ಮೂಲಕ ತೆರೆ ಮೇಲೆ ಒಂದಾಗಲಿ ಅಂತಿದ್ದಾರೆ ಅಭಿಮಾನಿಗಳು.
