ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೂಪರ್ ಹಿಟ್ ಸಿನಿಮಾವನ್ನ ನಕಲು ಮಾಡಿದ್ದೆ: ವರ್ಮಾ ಬಿಚ್ಚಿಟ್ಟ ‘ಶಿವ’ ಸತ್ಯ
1989ರಲ್ಲಿ ತೆರೆಕಂಡ ನಾಗಾರ್ಜುನ್ ನಟನೆಯ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಶಿವ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ತೆಲುಗು ಸಿನಿಮಾ ಜಗತ್ತಿನಲ್ಲಿ ದೊಡ್ಡ ಬದಲಾವಣೆ ಹುಟ್ಟುಹಾಕಿತ್ತು. ಈ ಸಿನಿಮಾ ಬಿಡುಗಡೆ ಆಗಿ ಸಾಕಷ್ಟು ವರ್ಷಗಳೇ ಕಳೆದಿದ್ದರು ಇಂದಿಗೂ ಎವರ್ ಗ್ರೀನ್ ಸಿನಿಮಾ ಎಂಬ ಖ್ಯಾತಿ ಘಳಿಸಿದೆ.
ಈ ಸೂಪರ್ ಹಿಟ್ ಸಿನಿಮಾವನ್ನು ಮತ್ತೊಂದು ಸೂಪರ್ ಹಿಟ್ ಚಿತ್ರ ರಿಟರ್ನ್ ಆಫ್ ದಿ ಡ್ರಾಗನ್ ಸಿನಿಮಾದಿಂದ ಕಾಪಿ ಮಾಡಿದ್ದೇನೆ‘ ಎಂದು ಆರ್ ಜಿವಿ ಹೇಳಿದ್ದಾರೆ. ರಿಟರ್ನ್ ಆಫ್ ದಿ ಡ್ರಾಗನ್ ಚಿತ್ರದಲ್ಲಿ ನಾಯಕ ರೆಸ್ಟೋರೆಂಟ್‌ಗಾಗಿ ಹೋರಾಡುತ್ತಾನೆ. ಆದರೆ ನಾನು ಇಲ್ಲಿ ರೆಸ್ಟೋರೆಂಟ್ ಬದಲಿಗೆ ಕಾಲೇಜು ವಿಷಯವನ್ನು ಇಟ್ಟುಕೊಂಡಿದ್ದೆ. ಅದಕ್ಕಾಗಿಯೇ ನಾನು 20 ನಿಮಿಷದಲ್ಲಿ ಈ ಸ್ಕ್ರಿಪ್ಟ್ ಬರೆಯಲು ಸಾಧ್ಯವಾಯಿತು ಎಂದು ವರ್ಮಾ ಹೇಳಿದ್ದಾರೆ.
