• June 19, 2026

ವಿಕ್ರಾಂತ್ ರೋಣ ಸಿನಿಮಾದ ಮತ್ತೊಂದು ಹಾಡು ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಖತ್ ನಿರೀಕ್ಷೆ ಮೂಡಿಸಿರುವ ಸಿನಿಮಾ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ. ರಿಲೀಸ್ ಗೂ ಮುನ್ನವೇ ದೊಡ್ಟ ಮಟ್ಟದಲ್ಲಿ ಸದ್ದು ಮಾಡ್ತಿರೋ ವಿಕ್ರಾಂತ್ ರೋಣ ಕಣ್ಮುಂಬಿಕೊಳ್ಳೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಈಗಾಗ್ಲೆ ಚಿತ್ರತಂಡ ಎರಡು ಹಾಡುಗಳನ್ನ ಬಿಡುಗಡೆ ಮಾಡಿದ್ದು ಇದೀಗ ಮತ್ತೊಂದು ಹಾಡನ್ನ ಚಿತ್ರತಂಡ ರಿಲೀಸ್ ಮಾಡಿದೆ. ಅನುಪ್ ಬಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಿರೂಪ್ ಬಂಡಾರಿ ಹಾಗೂ ನೀತಾ ಅಶೋಕ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರತಂಡ ನಿರೂಪ್ ಕಾಣಿಸಿಕೊಂಡಿರುವ ಹೇ ಫಕಿರಾ ಸಿನಿಮಾದ ಹಾಡನ್ನ ಚಿತ್ರತಂಡ ಬಿಡುಗಡೆ ಮಾಡಿದೆ. ಮೊದಲು ರಾ ರಾ ರಕ್ಕಮ್ಮ ಹಾಡನ್ನು ಬಿಡುಗಡೆ ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಚಿತ್ರತಂಡ ಎರಡನೇ ಬಾರಿ ತಂದೆ ಹಾಗೂ ಮಗಳ ಬಾಂಧವ್ಯ ಸಾರುವ ಹಾಡನ್ನು ರಿಲೀಸ್ ಮಾಡಿತ್ತು. ಇದೀಗ ಬಿಡುಗಡೆ ಮಾಡಿರುವ ಹೇ ಫಕಿರಾ ಹಾಡಿನಲ್ಲಿ ಮಗನಿಗಾಗಿ ಕಾಯುವ ತಾಯಿಯ ಎಮೋಷನಲ್ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ತೆರೆಗೆ ಬರಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now