• February 10, 2026

ಪವಿತ್ರಾ ಲೋಕೇಶ್ ನನ್ನ ಪತ್ನಿ ಅನ್ನೋದಕ್ಕೆ ಸಾಕಷ್ಟು ಪರಾವೆಗಳಿವೆ : ನಟ ಸುಚೇಂದ್ರ ಪ್ರಸಾದ್

ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈಗಾಗ್ಲೆ ಮೂರು ಮದುವೆಯಾಗಿರೋ ನರೇಶ್ ಪವಿತ್ರ ಜೊತೆ ನಾಲ್ಕನೇ ಮದುವೆಯಾಗೋಕೆ ಸಿದ್ದವಾಗಿದ್ದಾರೆ ಎನ್ನಲಾಗ್ತಿದೆ. ಇತ್ತ ನಟಿ ಪವಿತ್ರ ಲೋಕೇಶ್ ಕೂಡ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ನರೇಶ್ ಜೊತೆ ಹೋಗೋಕೆ ಮುಂದಾಗಿದ್ದಾರೆ. ಪವಿತ್ರ ಹಾಗೂ ಸುಚೇಂದ್ರ ಪ್ರಸಾದ್ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದ್ರೆ ಇತ್ತೀಚೆಗೆ ಪವಿತ್ರಾ ಲೋಕೇಶ್ ಹೇಳಿದ ಮಾತೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ನಾನು ಸುಚೇಂದ್ರ ಪ್ರಸಾದ್ ರನ್ನ ಮದುವೆಯೇ ಆಗಿಲ್ಲ. ಇನ್ನೂ ಡಿವೋರ್ಸ್ ಪಡೆಯುವ ಬಗ್ಗೆ ಮಾತೆಲ್ಲಿಂದ ಎಂದು ಹೇಳಿ ಸಂಚಲನ ಮೂಡಿಸಿದ್ರು. ಹೆಂಡತಿಯ ಮಾತಿಗೆ ಸೈಲೆಂಟ್ ಆಗಿಯೇ ಇದ್ದ ಸುಚೇಂದ್ರ ಪ್ರಸಾದ್ ಇದೀಗ ಆ ಕುರಿತು ಮಾತನಾಡಿದ್ದಾರೆ. ನಾನು ಹಿಂದೂ ವಿವಾಹದ ಸಂಪ್ರದಾಯದಂತೆ ಪವಿತ್ರಾ ಲೋಕೇಶ್ ಅವರನ್ನು ಮದುವೆ ಆಗಿದ್ದೇನೆ. ನಾನೇ ಪವಿತ್ರಾ ಲೋಕೇಶ್ ಅವರ ಗಂಡ ಎನ್ನುವುದಕ್ಕೆ ಅವರ ಪಾಸ್ ಪೋರ್ಟ್ ಹಾಗೂ ಆಧಾರ್ ಕಾರ್ಡ್ ಗಮನಿಸಿದರೆ ಗೊತ್ತಾಗುತ್ತದೆ. ನನ್ನ ಪಾಸ್ ಪೋರ್ಟ್ ನಲ್ಲೂ ಅವರೇ ಹೆಂಡತಿ ಅಂತಿದೆ. ಅಲ್ಲದೇ, ನಾವಿಬ್ಬರೂ ಗಂಡ ಹೆಂಡತಿ ಅನ್ನುವ ಕಾರಣಕ್ಕಾಗಿಯೇ ಹಲವಾರು ಧಾರ್ಮಿಕ ಗುರುಗಳು ನಮ್ಮನ್ನು ಸನ್ಮಾನಿಸಿದ್ದು, ಸಾಕಷ್ಟು ಕಾರ್ಯಕ್ರಮಗಳಿಗೆ ಗಂಡ ಹೆಂಡತಿಯಾಗಿ ಹೋಗಿದ್ದೇವೆ. ಆದರೆ ನಮ್ಮ ಮದುವೆಯ ನೊಂದಣಿ ಮಾತ್ರ ಮಾಡಿಸಿಲ್ಲ ಎಂದಿದ್ದಾರೆ. ಮದುವೆ ನೋಂದಣಿ ಪತ್ರ ವಿದೇಶಿ ಸಂಸ್ಕೃತಿಯಾಗಿದ್ದು, ಭಾರತದಲ್ಲಿ ಕಡ್ಡಾಯವಲ್ಲ ಎನ್ನುವ ಕಾರಣಕ್ಕೆ ಸಮ್ಮನಿದ್ದೆ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now