• March 14, 2026

ವ್ಯಾಕ್ಸಿನ್ ಮೇಲೆ ಸಿನಿಮಾ ಮಾಡಲು ಮುಂದಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸದ್ಯ ತಮ್ಮ ಹೊಸ ಸಿನಿಮಾವನ್ನು ಘೋಷಿಸಿದ್ದಾರೆ.ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಮುಂದಿನ ಸಿನಿಮಾ ವ್ಯಾಕ್ಸಿನ್ ವಾರ್ ಮೇಲೆ ಇರಲಿದ್ದು ಇದೇ ಕಾರಣಕ್ಕೆ ಚಿತ್ರಕ್ಕೆ ದಿ ವ್ಯಾಕ್ಸಿವ್ ವಾರ್ ಎಂದು ಟೈಟಲ್ ಇಡಲಾಗಿದೆ. ದಿ ವ್ಯಾಕ್ಸಿನ್  ವಾರ್ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ತೆರೆಗೆ ಬರಲಿದೆಯಂತೆ. ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಆವಾಂತರ ಸೃಷ್ಟಿಸಿತ್ತು? ಈ ವ್ಯಾಕ್ಸಿನ್ ಏನೆಲ್ಲ ಕೆಲಸ ಮಾಡಿತ್ತು? ವ್ಯಾಕ್ಸಿನ್ ಮಾಫಿಯಾದ ಬಗ್ಗೆ ಹಬ್ಬಿಕೊಂಡಿದ್ದ ಹಲವು ಅನುಮಾನಗಳ ಸುತ್ತು ದಿ ವ್ಯಾಕ್ಸಿನ್ ವಾರ್ ಸಿನಿಮಾದ ಕಥೆ ಹೆಣೆಯಲಾಗಿದೆಯಂತೆ. ದಿ ಕಾಶ್ಮೀರ್ ಫೈಲ್ಸ್  ಸಿನಿಮಾ ತಯಾರಿ ವೇಳೆಯಲ್ಲೇ ವ್ಯಾಕ್ಸಿನ್ ಬಗ್ಗೆ ಸಂಶೋಧನೆ ಮಾಡಿದ್ದರಂತೆ  ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಆದರೆ ಕೋವಿಡ್ ಕಾರಣದಿಂದಾಗಿ ಕಾಶ್ಮೀರ್ ಫೈಲ್ಸ್ ಶೂಟಿಂಗ್ ಮುಂದೂಡಲ್ಪಟ್ಟಾಗ  ವ್ಯಾಕ್ಸಿನ್ ಕುರಿತು ಕಥೆ ರೆಡಿಮಾಡಿದ್ದರಂತೆ. ತಮ್ಮ ಸಂಶೋಧನೆಯಲ್ಲಿ ಕಂಡ  ಅನುಭವಗಳನ್ನು ಈ ಸಿನಿಮಾದಲ್ಲಿ ವಿವೇಕ್ ಅಳವಡಿಸಿಕೊಂಡಿದ್ದಾರಂತೆ. ವ್ಯಾಕ್ಸಿನ ತಯಾರಿಕೆಯಲ್ಲಿ ಗೆದ್ದಿರುವ ವಿಜ್ಞಾನಿಗಳ ಶ್ರಮ, ಅದನ್ನು ಅಷ್ಟೇ ವೇಗವಾಗಿ ತಲುಪಿಸಿದ ರೋಚಕ ಕಥೆಯೂ ಈ ಸಿನಿಮಾದಲ್ಲಿ ಇರಲಿದೆಯಂತೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now