• June 19, 2026

ಯುವರಾಜ್ ಕುಮಾರ್ ಚಿತ್ರದ ಬಗ್ಗೆ ಸಿಹಿ ಸುದ್ದಿ ಕೊಟ್ಟ ಸಂತೋಷ್ ಆನಂದ್ ರಾಮ್

ದೊಡ್ಮನೆ ಕುಡಿ ಯುವರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ. ಅಭಿಮಾನಿಗಳ ಆಸೆಯಂತೆ ಸಂತೋಷ್ ಆನಂದ್‌ರಾಮ್ ಹಾಗೂ ಯುವರಾಜ್ ಕುಮಾರ್ ಕಾಂಬಿನೇಷನ್‌ನ ಸಿನಿಮಾ ಬರೋದು ಕನ್ಪಾರ್ಮ್ ಆಗಿದ್ದು ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಯುವ ರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿಕೊಡಲು ಭರ್ಜರಿಯಾಗಿಯೇ ತಯಾರಾಗಿದ್ದಾರೆ. ಈ ಹಿಂದೆ ` ರಣಧೀರ ಕಂಠೀರವ’ ಚಿತ್ರದ ಮೂಲಕ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ ಎನ್ನಲಾಗುತ್ತಿದೆ. ಆದರೆ ಇದೀಗ ಸಂತೋಷ್ ಆನಂದ್ ರಾಮ್ ಸಿನಿಮಾದ ಮೂಲಕ ಯುವ ಲಾಂಚ್ ಆಗ್ತಿದ್ದಾರೆ. ಯುವ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನ ಸಿನಿಮಾಗೆ ಹೊಂಬಾಳೆ ಸಂಸ್ಥೆ ಸಾಥ್ ಕೊಟ್ಟಿದೆ. ಕಳೆದ ಏಪ್ರಿಲ್ ಯುವನ ಭರ್ಜರಿ ಫೋಟೋಶೂಟ್ ಮಾಡಿಸಿ ಅಧಿಕೃತ ಅನೌನ್ಸ್ ಕೂಡ ಮಾಡಿದ್ದರು. ಬಳಿಕ ಈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ಇದೀಗ ಯುವ ಸ್ಯಾಂಡಲ್ ವುಡ್ ಎಂಟ್ರಿಯ ಕುರಿತು ಗುಡ್ ನ್ಯೂಸ್ ಸಿಕ್ಕಿದೆ. ನನ್ನ ಸಹೋದರ ಸಮಾನರಾದ ಎಲ್ಲ ಅಭಿಮಾನಿಗಳಿಗೆ ಅತಿ ಶೀಘ್ರದಲ್ಲಿ ನನ್ನ ಹಾಗೂ ಯುವರಾಜ್ ಕುಮಾರ್ ಕಾಂಬಿನೇಶನ್ ಚಿತ್ರದ ಎಲ್ಲ ಮಾಹಿತಿ ಹೊರಬರುತ್ತದೆ ನಿಮ್ಮ ಆಶೀರ್ವಾದ ಸದಾ ಇರಲಿ  ಎಂದು ಸೋಷಿಯಲ್ ಮೀಡಿಯಾದಲ್ಲಿ ಸಂತೋಷ್ ಆನಂದ್ ರಾಮ್ ಬರೆದುಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now