ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
35 ವರ್ಷಗಳ ಬಳಿಕ ಮತ್ತೆ ಒಂದಾದ ಕಮಲ್ ಹಾಸನ್, ಮಣಿರತ್ನಂ
ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಕಮಲ್ ಹಾಗೂ ಮಣಿರತ್ನಂ 35 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳ ಬಹು ದಿನಗಳ ಆಸೆ ಇಡೇರುತ್ತಿದೆ. ಮಣಿರತ್ನಂ ಮತ್ತು ಕಮಲ್ ಹಾಸನ್ ಇದೀಗ ಜೊತೆಯಾಗಿ ಕೆಲಸ ಮಾಡಲಿದ್ದು, ಈ ಸಿನಿಮಾವನ್ನು ಉದಯನಿಧಿ ನಿರ್ಮಾಣ ಮಾಡಲಿದ್ದು, ಎ.ಆರ್.ರೆಹಮಾನ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬರಲಿವೆ.
ಇದು ಕಮಲ್ ಹಾಸನ್ ಅವರ 234ನೇ ಸಿನಿಮಾವಾಗಿದ್ದು, 2024ರಲ್ಲಿ ಈ ಸಿನಿಮಾ ತೆರಿಗೆ ಬರಲಿದೆ ಎನ್ನಲಾಗುತ್ತಿದೆ. ಸದ್ಯ ಕಮಲ್ ಏಜೆಂಟ್ ವಿಕ್ರಮ್ ಸಿನಿಮಾದ ಮೂಲಕ ಮತ್ತೆ ಅಬ್ಬರಿಸಿದ್ದಾರೆ. ಇತ್ತ ಮಣಿರತ್ನಂ ಕೂಡ ಪೊನ್ನಿಯಿನ್ ಸೆಲ್ವನ್ ಸಿನಿಮಾದ ಮೂಲಕ ಮತ್ತೊಂದು ಹಿಟ್ ಸಕ್ಸಸ್ ಕಂಡಿದ್ದು ಇದೀಗ ಈ ಇಬ್ಬರು ಒಂದಾಗಿದ್ದಾರೆ.
