• March 15, 2026

ಹೊಸ ಮನೆಗೆ ಕಾಲಿಟ್ಟ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್: ಇಲ್ಲಿದೆ ‘ಕ್ರಿಸ್​ಮಿ ನೆಸ್ಟ್​’ ಪ್ರವೇಶದ ಬ್ಯೂಟಿಫುಲ್ ಫೋಟೋಸ್

2021ರ ಫೆಬ್ರವರಿ 14ರಂದು ಹಸೆಮಣೆ ಏರಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಇದೀಗ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಲವ್ ಮಾಕ್ಟೇಲ್ ಚಿತ್ರದ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡಿದ್ದ ಜೋಡಿಗಳು ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಜೋಡಿ ಹಕ್ಕಿಗಳು ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ತಮ್ಮ ಮನೆಗೆ ಕ್ರಿಸ್ ಮಿ ನೆಸ್ಟ್ ಎಂದು ಹೆಸರಿಟ್ಟಿದ್ದಾರೆ. ಕೃಷ್ಣ ಹಾಗೂ ಮಿಲನಾ ಜೋಡಿಗೆ ಅಭಿಮಾನಿಗಳು ಪ್ರೀತಿಯಿಂದ ಕ್ರಿಸ್ ಮಿ ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ಈ ಜೋಡಿ ತಮ್ಮ ಮನೆಗೆ ಅದೇ ಹೆಸರಿಟ್ಟಿದೆ. ಕ್ರಿಸ್ ಮಿ ನೆಸ್ಟ್ ಗೃಹಪ್ರವೇಶದ ಫೋಟೋ ನೋಡಿದ ಫ್ಯಾನ್ಸ್ ಕ್ರಿಸ್ ಮಿ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now